2024: ಗುಜರಾತ್ ವಿರುದ್ಧ ಯುಪಿಗೆ 6 ವಿಕೆಟ್ ಗಳ ಜಯ! ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಪ್ರದೇಶ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ತಂಡ 6 ವಿಕೆಟ್ ಗಳ ಜಯ ಗಳಿಸಿದೆ. ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಪ್ರದೇಶ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ತಂಡ 6 ವಿಕೆಟ್ ಗಳ ಜಯ ಗಳಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ ವಾರಿಯರ್ಸ್ ನಿಗದಿತ 20 ಓವರ್ ಗಳಲ್ಲಿ ಗುಜರಾತ್ ತಂಡವನ್ನು 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.ಗುಜರಾತ್ ಪರ ಲಾರಾ ವೊಲ್ವಾರ್ಡ್ಟ್ 26 ಎಸೆತಗಳಲ್ಲಿ 28 ರನ್ ಗಳಿಸಿದರೆ, ಬೆತ್ ಮೂನಿ (16 ಎಸೆತಗಳಲ್ಲಿ 16 ರನ್) ಹರ್ಲೀನ್ ಡಿಯೋಲ್ (24 ಎಸೆತಗಳಲ್ಲಿ 18 ರನ್) ಫೋಬೆ ಲಿಚ್ಫೀಲ್ಡ್ (26 ಎಸೆತಗಳಲ್ಲಿ 35 ರನ್) ಆಶ್ಲೀಗ್ ಗಾರ್ಡ್ನರ್ (17 ಎಸೆತಗಳಲ್ಲಿ 30 ರನ್) ಗಳಿಸಿದರು.ಉತ್ತರ ಪ್ರದೇಶ ತಂಡ ಗುಜರಾತ್ ನೀಡಿದ್ದ ಸರಳ ರನ್ ಗುರಿಯನ್ನು ತಲುಪಿತ್ತು. 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸುವ ಮೂಲಕ ಯುಪಿ ವಾರಿಯರ್ಸ್ ಗೆಲುವು ಸಾಧಿಸಿತು.