ಅಂಪೈರ್ ನಿರ್ಣಯದ ವಿರುದ್ಧ ಪೊಲಾರ್ಡ್ ವಿನೂತನ ಪ್ರತಿಭಟನೆ: ವಿಡಿಯೋ ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್ ಅಂಪೈರ್ ನಿರ್ಣಯನ್ನು ವಿರೋಧಿಸುತ್ತಾ ಅಂಪೈರ್‌ನಿಂದ ದೂರ ಸರಿದು ನಿಂತು ವಿನೂತನವಾಗಿ ಪ್ರತಿಭಟಿಸಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಗ್ರಾಸ್‌ ಐಲೆಟ್‌: ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಸಿಎಲ್ )ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮಂಗಳವಾರ ಸೆಂಟ್ ಲೂಸಿಯಾ ಕಿಂಗ್ಸ್ (ಎಸ್ಎಲ್ ಕೆ) ಟ್ರಿನ್ ಬಾಗೋ ನೈಟ್ ರೈಡರ್ಸ್ (ಟಿಕೆಆರ್) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎಲ್ ಎಲ್ ಕೆ ಪರ ಬೌಲರ್ ವಹಾಬ್ ರಿಯಾಜ್ ಭಾರಿ ವೈಡ್ ಬಾಲ್ ಎಸೆದರು. ಕ್ರೀಸ್ ನಲ್ಲಿದ್ದ ಟಿಕೆಆರ್ ಬ್ಯಾಟ್ಸ್ ಮನ್ ಟಿಮ್ ಸೀಫರ್ಟ್ ಚೆಂಡನ್ನು ಆಡಲು ಯತ್ನಿಸಿದರೂ ಸಿಗಲಿಲ್ಲ. ಆದರೆ, ಫೀಲ್ಡ್ ಅಂಪೈರ್ ಇದನ್ನು ವೈಡ್ ಎಂದು ಪರಿಗಣಿಸಲಿಲ್ಲ. ಇದರಿಂದ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮತ್ತೊಬ್ಬ ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್ ಅಂಪೈರ್ ನಿರ್ಣಯನ್ನು ವಿರೋಧಿಸುತ್ತಾ ಅಂಪೈರ್‌ನಿಂದ ದೂರ ಸರಿದು ನಿಂತು ವಿನೂತನವಾಗಿ ಪ್ರತಿಭಟಿಸಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. : ? : # #CPL2021 @KieronPollard55 ../NGjSdMqmYuಈ ಪಂದ್ಯದಲ್ಲಿ, ಪೊಲಾರ್ಡ್ (26 ಎಸೆತಗಳಲ್ಲಿ 41) ಮತ್ತೊಬ್ಬ ಬ್ಯಾಟ್ಸ್ ಮನ್ ಸೀಫರ್ಟ್ (25 ಎಸೆತಗಳಲ್ಲಿ 37) ಸೇರಿ ಐದನೇ ವಿಕೆಟ್ ಗಳಿಗೆ 78 ರನ್ ಸೇರಿಸಿ ಎಸ್ ಎಲ್ ಕೆ ಗೆ 158 ರನ್ ಗಳ ಗುರಿ ಇರಿಸಿದರು. ನಂತರ ಗುರಿ ಬೆನ್ನಟ್ಟಿದ ಎಸ್‌ಎಲ್‌ಕೆ ನಿಗದಿತ 20 ಓವರ್‌ಗಳಲ್ಲಿ 131 ರನ್‌ ಗಳಿಗೆ ಆಲ್‌ ಔಟ್‌ ಆಯಿತು. ಇದರೊಂದಿಗೆ ಕೆಟಿ ಆರ್‌ ತಂಡ 27 ರನ್ ಗಳ ಜಯ ಸಾಧಿಸಿತು.