2023: ಜಿಂಬಾಬ್ವೆ ಮಣಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದ ಶ್ರೀಲಂಕಾ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಸತತ 4ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದ್ದು, ಟೂರ್ನಿಗೆ ಅರ್ಹತೆ ಗಿಟ್ಟಿಸಿದ 9ನೇ ತಂಡವಾಗಿದೆ. ಹರಾರೆ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಸತತ 4ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದ್ದು, ಟೂರ್ನಿಗೆ ಅರ್ಹತೆ ಗಿಟ್ಟಿಸಿದ 9ನೇ ತಂಡವಾಗಿದೆ.ಹರಾರೆಯಲ್ಲಿ ಇಂದು ನಡೆದ ಏಕದಿನ ವಿಶ್ವಕಪ್ ( 2023) ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ ಈ ಸಾಧನೆ ಮಾಡಿದೆ. ಶ್ರೀಲಂಕಾಗೆ ಇದು ಸತತ ನಾಲ್ಕನೇ ಗೆಲುವಾಗಿದ್ದು ಆ ಮೂಲಕ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಜಿಂಬಾಬ್ವೆ ವಿರುದ್ಧ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಪಾಲ್ಗೊಳ್ಳುವುದು ಖಚಿತವಾಗಿದೆ.ಇದನ್ನೂ ಓದಿ: 2023: ಸ್ಕಾಟ್ಲೆಂಡ್ ವಿರುದ್ಧ ಹೀನಾಯ ಸೋಲು, ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು 2 ಬಾರಿ ಚಾಂಪಿಯನ್ ವಿಂಡೀಸ್‌ ವಿಫಲಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದುಸುನ್ ಶನಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ಮಹೀಶ ತೀಕ್ಷಣ ಮತ್ತು ದಿಲ್ಶಾನ್ ಮಧುಶಂಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 32.2 ಓವರ್ ನಲ್ಲಿ 165 ರನ್ ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಕೇವಲ 33.1 ಓವರ್ ನಲ್ಲಿ ಒಂದು ವಿಕೆಟ್ ಕಳೆದು 169 ರನ್ ಗಳಿಸಿ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಲಂಕಾ ಪರ ಪಾತುಂ ನಿಸ್ಸಾಂಕ (101) ಭರ್ಜರಿ ಶತಕ ಸಿಡಿಸಿದರೆ, ಕುಸಾಲ್ ಮೆಂಡಿಸ್ (25) ಗೆಲುವಿನಲ್ಲಿ ನೆರವಾದರು.ಇದನ್ನೂ ಓದಿ: ಬಿಗ್ ತ್ರೀ ಪ್ರಾಬಲ್ಯ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ: ಗೇಲ್ ಎಚ್ಚರಿಕೆಈ ಗೆಲುವಿನೊಂದಿಗೆ ಅಕ್ಟೋಬರ್ 5 ರಿಂದ ಭಾರತದಲ್ಲಿ ಶುರುವಾಗಲಿರುವ ಏಕದಿನ ವಿಶ್ವಕಪ್ಗೆ ಶ್ರೀಲಂಕಾ ತಂಡವು ಅರ್ಹತೆ ಪಡೆದುಕೊಂಡಿದೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ 8 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿದೆ. ಇದೀಗ ಅರ್ಹತಾ ಸುತ್ತಿನ ಮೂಲಕ ಶ್ರೀಲಂಕಾ ತಂಡವು 9ನೇ ತಂಡವಾಗಿ ಎಂಟ್ರಿ ಕೊಟ್ಟಿದೆ. ಇನ್ನು ಒಂದು ಸ್ಥಾನ ಮಾತ್ರ ಉಳಿದಿದ್ದು, ಈ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿರುವ ಜಿಂಬಾಬ್ವೆ ಹಾಗೂ ಸ್ಕಾಟ್ಲ್ಯಾಂಡ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.