ವಿಶ್ವಕಪ್ 2023: ಕೊಹ್ಲಿ, ಗಿಲ್, ಶ್ರೇಯಸ್ ಬಿರುಸಿನ ಅರ್ಧಶತಕ; ಲಂಕಾಕ್ಕೆ 358 ಬೃಹತ್ ರನ್‌ ಗುರಿ ವಿಶ್ವಕಪ್‌ 2023 ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮತ್ತು ಗಿಲ್ ನಡುವಿನ 189 ರನ್‌ಗಳ ಜೊತೆಯಾಟ ಹಾಗೂ ಶ್ರೇಯಸ್ ಅಯ್ಯರ್ ಬಿರುಸಿನ ಇನ್ನಿಂಗ್ಸ್ ನಿಂದಾಗಿ ಶ್ರೀಲಂಕಾ ಗೆಲುವಿಗೆ 358 ರನ್‌ಗಳ ಗುರಿಯನ್ನು ನೀಡಿದೆ. ಮುಂಬೈ: ವಿಶ್ವಕಪ್‌ 2023 ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮತ್ತು ಗಿಲ್ ನಡುವಿನ 189 ರನ್‌ಗಳ ಜೊತೆಯಾಟ ಹಾಗೂ ಶ್ರೇಯಸ್ ಅಯ್ಯರ್ ಬಿರುಸಿನ ಇನ್ನಿಂಗ್ಸ್ ನಿಂದಾಗಿ ಶ್ರೀಲಂಕಾ ಗೆಲುವಿಗೆ 358 ರನ್‌ಗಳ ಗುರಿಯನ್ನು ನೀಡಿದೆ.ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಬೌಂಡರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದರು. ಆದರೆ ಮುಂದಿನ ಎಸೆತದಲ್ಲಿ ದಿಲ್ಶಾನ್ ಮಧುಶಂಕ ಬೌಲ್ಡ್ ಮಾಡುವ ಮೂಲಕ ರೋಹಿತ್ ನನ್ನು ಪೆವಿಲಿಯನ್ ಗೆ ಕಳುಹಿಸಿದರು. ಇದಾದ ಬಳಿಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 189 ರನ್‌ಗಳ ಜೊತೆಯಾಟ ನೀಡುವ ಮೂಲಕ ಭಾರತವನ್ನು ಅತ್ಯಂತ ಬಲಿಷ್ಠ ಸ್ಥಿತಿಗೆ ತಂದರು.ಇದನ್ನೂ ಓದಿ: 2023: ಆಸ್ಟ್ರೇಲಿಯಾಗೆ ಭಾರಿ ಆಘಾತ, ಪ್ರಮುಖ ಆಲ್ರೌಂಡರ್ ತವರಿಗೆ ವಾಪಸ್ಪವರ್‌ಪ್ಲೇಯ ಮೊದಲ ಹತ್ತು ಓವರ್‌ಗಳಲ್ಲಿ ಭಾರತ ಒಂದು ವಿಕೆಟ್‌ಗೆ 60 ರನ್ ಗಳಿಸಿತು. 16ನೇ ಓವರ್‌ನಲ್ಲಿ ಭಾರತದ ಸ್ಕೋರ್ 100ರ ಗಡಿ ದಾಟಿತು. ವಿರಾಟ್ ಕೊಹ್ಲಿ 88 ರನ್ ಬಾರಿಸುವ ಮೂಲಕ ಶತಕ ವಂಚಿತರಾದರೆ ಶುಭ್ಮನ್ ಗಿಲ್ 92 ರನ್ ಗಳಿಸಿ ಔಟಾದರು. ನಂತರ ಬಂದ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮಾಡಿ 82 ರನ್ ಪೇರಿಸಿದರು. ಕೆಎಲ್ ರಾಹುಲ್ 21 ರನ್ ಸಿಡಿಸಿದರೆ ರವೀಂದ್ರ ಜಡೇಜಾ 35 ರನ್ ಬಾರಿಸಿ ಔಟಾದರು. ಶ್ರೀಲಂಕಾ ಪರ ದಿಲ್ಶನ್ ಮದುಶಂಕ 5 ವಿಕೆಟ್ ಪಡೆದರೆ ಚಮೇರಾ 1 ವಿಕೆಟ್ ಪಡೆದಿದ್ದಾರೆ.