ಟಿ20 ವಿಶ್ವಕಪ್: ಭಾರತ-ಪಾಕ್‌ ಹೈವೋಲ್ಟೇಜ್ ಪಂದ್ಯದಂದೆ ದಿಟ್ಟ ನಿರ್ಧಾರ ಕೈಗೊಳ್ಳಲಿರುವ ಪಾಕ್ ಸೊಸೆ ಸಾನಿಯಾ! ಟಿ20 ವಿಶ್ವಕಪ್ ಭಾಗವಾಗಿ ಟೀಂ ಇಂಡಿಯಾ-ಪಾಕಿಸ್ತಾನ ತಂಡಗಳ ನಡುವೆ ಈ ತಿಂಗಳ 24ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ, ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ ವೇದಿಕೆಯಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಹೈದರಾಬಾದ್: ಟಿ20 ವಿಶ್ವಕಪ್ ಭಾಗವಾಗಿ ಟೀಂ ಇಂಡಿಯಾ-ಪಾಕಿಸ್ತಾನ ತಂಡಗಳ ನಡುವೆ ಈ ತಿಂಗಳ 24ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ, ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ ವೇದಿಕೆಯಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್ಪಂದ್ಯದ ಸಮಯದಲ್ಲಿ ಎರಡು ದೇಶಗಳ ಕ್ರಿಕೆಟ್‌ ಅಭಿಮಾನಿಗಳಿಂದ ಎದುರಾಗಬಹುದಾದ ಮುಜುಗರ ಪರಿಸ್ಥಿತಿಯಿಂದ ಪಾರಾಗಲು ಅಂದು ತಾವು ಸಾಮಾಜಿಕ ಮಾಧ್ಯಮದಿಂದ ದೂರವಿರಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.ಸಾಂಪ್ರದಾಯಿಕ ಎದುರಾಳಿಗಳ ನಡುವೆ ಪಂದ್ಯ ನಡೆಯುವ ಸಮಯದಲ್ಲಿ ಎರಡೂ ದೇಶಗಳ ಅಭಿಮಾನಿಗಳು ಉತ್ಸಾಹ, ಉದ್ವೇಗಗಳಿಗೆ ಒಳಗಾಗುತ್ತಾರೆ. ಹಾಗಾಗಿ ತಾವು ಆ ದಿನ ಸಾಮಾಜಿಕ ಮಾಧ್ಯಮಗಳಿಂದ "ಮಾಯ"ವಾಗುವುದಾಗಿ ಇನ್ಸ್ಟಾಗ್ರಾಮ್‌ ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್‌ರನ್ನು ಟ್ರೋಲ್ ಮಾಡಿದ ನೆಟಿಗರು!ಈ ಹಿಂದೆ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಎರಡೂ ದೇಶಗಳ ಅಭಿಮಾನಿಗಳು ತಮ್ಮನ್ನು ವ್ಯಾಪಕವಾಗಿ ಟ್ರೋಲ್ ಮಾಡಿದ ಹಿನ್ನೆಲೆಯಲ್ಲಿ ಸಾನಿಯಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ನೆಟಿಜನ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾನಿಯಾ ಪತಿ ಶೋಯೆಬ್ ಮಲಿಕ್ ಪಾಕಿಸ್ತಾನ ತಂಡದ ಪ್ರಮುಖ ಸದಸ್ಯರಾಗಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಈವರೆಗೆ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ.