ಬಾಂಗ್ಲಾ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ಮೂವರಿಗೆ ಕೊರೋನಾ! ಶ್ರೀಲಂಕಾ ಕ್ರಿಕೆಟ್ ತಂಡದ ಮೂವರು ಸದಸ್ಯರು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದ ಕೆಲವೇ ಗಂಟೆಗಳ ಮೊದಲು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಢಾಕಾ: ಶ್ರೀಲಂಕಾ ಕ್ರಿಕೆಟ್ ತಂಡದ ಮೂವರು ಸದಸ್ಯರು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದ ಕೆಲವೇ ಗಂಟೆಗಳ ಮೊದಲು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.ಶ್ರೀಲಂಕಾ ಆತಿಥೇಯ ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡುತ್ತಿದ್ದು ಎರಡನೇ ಮತ್ತು ಮೂರನೇ ಪಂದ್ಯವನ್ನು ಮೇ 25 ಮತ್ತು 28 ಕ್ಕೆ ನಿಗದಿಪಡಿಸಲಾಗಿದೆ.ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಿಂತ ಮುಂಚಿತವಾಗಿ ಇಬ್ಬರು ಆಟಗಾರರು ಮತ್ತು ಶ್ರೀಲಂಕಾದ ತರಬೇತುದಾರ ಕೋವಿಡ್ -19 ಪಾಸಿಟಿವ್ ವರದಿ ಪಡೆದಿದ್ದಾರೆ ಎಂದು ವರದಿ ಮಾಡಿದೆ.ಆದರೆ ಈ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ ಎಂದು ವೆಬ್‌ಸೈಟ್ ತಿಳಿಸಿದೆ.ವರದಿಗಳ ಪ್ರಕಾರ ತಂಡದ ಬೌಲಿಂಗ್ ತರಬೇತುದಾರರಾಗಿರುವ ಚಮಿಂದ ವಾಸ್, ಆಟಗಾರರಾದ ಇಸುರು ಉದಾನ ಹಾಗೂ ಶಿರನ್ ಫರ್ನಾಂಡೊ ಅವರಿಗೆ ಸೋಂಕು ದೃಢವಾಗಿದೆ.ಮೂರು ಪಂದ್ಯಗಳ ಏಕದಿನ ಸರಣಿಯು ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ.