ಐಪಿಎಲ್ 2023: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಟೂರ್ನಿಯಿಂದ ಹೊರಕ್ಕೆ! ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಬಿದಿದ್ದಾರೆ. ಇಡೀ ಟೂರ್ನಿಗೆ ಅಲಭ್ಯರಾಗುವ ವಿಷಯವನ್ನು ಅವರು ತಮ್ಮ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ತಿಳಿಸಿದ್ದಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ. ಮುಂಬೈ: ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಬಿದಿದ್ದಾರೆ. ಇಡೀ ಟೂರ್ನಿಗೆ ಅಲಭ್ಯರಾಗುವ ವಿಷಯವನ್ನು ಅವರು ತಮ್ಮ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ತಿಳಿಸಿದ್ದಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ.ಅಂತಾರಾಷ್ಟ್ರೀಯ ಪಂದ್ಯಗಳು ಇರುವುದರಿಂದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಡಿಸೆಂಬರ್ ನಲ್ಲಿ ನಡೆದ ಐಪಿಎಲ್ ಹರಾಜು ವೇಳೆಯಲ್ಲಿ ರೂ. 1.5 ಕೋಟಿಗೆ ಕೆಕೆಆರ್ ಶಕೀಬ್ ಅವರನ್ನು ಖರೀದಿಸಿತ್ತು.ಇದನ್ನೂ ಓದಿ: 2023: ಚೆನ್ನೈ ಅಬ್ಬರ... ಹೋರಾಡಿ ಸೋತ ಲಖನೌ ಸೂಪರ್‌ಜೈಂಟ್ಸ್ಮುಂದಿನ ಕೆಲವು ವಾರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಲ್ ರೌಂಡರ್ ಶಕೀಬ್ ಬ್ಯುಸಿ ಇರುವುದರಿಂದ ಐಪಿಎಲ್ ನಲ್ಲಿ ಆಡುತ್ತಿಲ್ಲ. ಇವರೊಂದಿಗೆ ಲಿಟ್ಟನ್ದಾಸ್ ಕೂಡಾ ಇಂದು ನಡೆಯುತ್ತಿರುವ ಕೆಕೆಆರ್ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕೂಡಾ ಬ್ಯುಸಿಯಾಗಿದ್ದು, ಮತ್ತೆ ಕೆಕೆಆರ್ ತಂಡ ಸೇರಿಕೊಳ್ಳಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.