2024: ದೆಹಲಿ ಕ್ಯಾಪಿಟಲ್ ವಿರುದ್ಧ ಕೆಕೆಆರ್ ಗೆ 7 ವಿಕೆಟ್ ಜಯ! ಕೋಲ್ಕತ್ತಾದಲ್ಲಿ ನಡೆದ ದೆಹಲಿ-ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ 7 ವಿಕೆಟ್ ಗಳ ಜಯ ಗಳಿಸಿದೆ. ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಡೆದ ದೆಹಲಿ-ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ 7 ವಿಕೆಟ್ ಗಳ ಜಯ ಗಳಿಸಿದೆ. ಫಿಲ್ ಸಾಲ್ಟ್ (68 ರನ್) ವರುಣ್ ಚಕ್ರವರ್ತಿ (16 ರನ್ ಗಳಿಗೆ 3 ವಿಕೆಟ್) ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ದೆಹಲಿ ತಂಡ ನೀಡಿದ 154 ರನ್ ಗಳ ಟಾರ್ಗೆಟ್ ನ್ನು ಕೋಲ್ಕತ್ತಾ ತಂಡ ಕೇವಲ 16.3 ಓವರ್ ಗಳಲ್ಲಿ ಗೆಲ್ಲುವ ಮೂಲಕ 7 ವಿಕೆಟ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತು. ಕೋಲ್ಕತ್ತಾ ತಂಡ ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. 9 ಪಂದ್ಯಗಳಿಂದ 12 ಪಾಯಿಂಟ್ ಗಳನ್ನು ತಂಡ ಪಡೆದಿದ್ದರೆ, ದೆಹಲಿ 11 ಪಂದ್ಯಗಳಿಂದ 10 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ.ಲಯ ಕಂಡುಕೊಂಡ ಚಕ್ರವರ್ತಿಕೋಲ್ಕತ್ತಾ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಎದುರಾಳಿ ತಂಡದ ಪ್ರಮುಖ ವಿಕೆಟ್ ಗಳಾದ ರಿಷಭ್ ಪಂತ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಕುಮಾರ್ ಕುಶಾಗ್ರಾ ಅವರ ವಿಕೆಟ್ ಗಳನ್ನು ಪಡೆದರು. ಕೇವಲ ವರುಣ್ ಚಕ್ರವರ್ತಿ ಮಾತ್ರವಲ್ಲದೇ ವೈಭವ್ ಅರೋರಾ, ರಾಣಾ ಹಾಗೂ ಸುನಿಲ್ ನರೈನ್ ಸಹ ತಂಡಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಕೆಟ್ ಗಳನ್ನು ಪಡೆದರು 43 ರನ್ ಗಳನ್ನು ನೀಡಿ 1 ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್ ತಂಡಕ್ಕೆ ದುಬಾರಿ ಬೌಲರ್ ಎನಿಸಿದರು.