ಏಷ್ಯನ್ ಗೇಮ್ಸ್ 2023 ಸೆಮೀಸ್ ಗೆ ಭಾರತ ಲಗ್ಗೆ: ನೇಪಾಳ ವಿರುದ್ಧ ಭರ್ಜರಿ ಶತಕ; ಗಿಲ್ ದಾಖಲೆ ಮುರಿದ ಜೈಸ್ವಾಲ್ ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿರುವ ಭಾರತ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದಾರೆ. ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿರುವ ಭಾರತ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದಾರೆ.ಹೌದು.. ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್‌ನ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಯಶಸ್ವಿ ನೇಪಾಳ ವಿರುದ್ಧ ಶತಕ ಬಾರಿಸಿದರು. ಯಶಸ್ವಿ ಜೈಸ್ವಾಲ್ 49 ಎಸೆತಗಳಲ್ಲಿ 100 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ, ಅವರು 7 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಹೊಡೆದರು, ಅವರ ಸ್ಟ್ರೈಕ್ ರೇಟ್ 204 ಆಗಿತ್ತು. : T20i - . ../PzFVxjxrCWಈ ಅದ್ಭುತ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಮೊದಲ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ಸಮಯದಲ್ಲಿ, ಅವರು ಯಾವುದೇ ಬಹು-ಕ್ರೀಡಾ ಸ್ಪರ್ಧೆಯಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದನ್ನೂ ಓದಿ: ವೈಯುಕ್ತಿಕ ತುರ್ತುಪರಿಸ್ಥಿತಿ: ಟೀಂ ಇಂಡಿಯಾ ಕ್ಯಾಂಪ್ ಬಿಟ್ಟು ಮುಂಬೈಗೆ ದೌಡಾಯಿಸಿದ ವಿರಾಟ್ ಕೊಹ್ಲಿಗಿಲ್ ದಾಖಲೆಯೂ ಧೂಳಿಪಟ ಇದಲ್ಲದೇ ಯಶಸ್ವಿ ಟಿ20ಯಲ್ಲಿ ಭಾರತದ ಅತ್ಯಂತ ಕಿರಿಯ ಶತಕವೀರ ಎನಿಸಿಕೊಂಡಿದ್ದು, ಜೈಸ್ವಾಲ್ ನೇಪಾಳ ವಿರುದ್ಧ 21 ವರ್ಷದ 279 ದಿನಗಳ ವಯಸ್ಸಿನಲ್ಲಿ ಶತಕ ಗಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶುಭ್‌ಮನ್ ಗಿಲ್ ಹೆಸರಿನಲ್ಲಿತ್ತು. ಈ ವರ್ಷದ ಆರಂಭದಲ್ಲಿ, ಗಿಲ್ 23 ವರ್ಷ ಮತ್ತು 146 ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಗಳಿಸಿದ್ದರು. ಅವರಿಗಿಂತ ಮೊದಲು, ಸುರೇಶ್ ರೈನಾ 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 23 ವರ್ಷ ಮತ್ತು 156 ದಿನಗಳ ವಯಸ್ಸಿನಲ್ಲಿ ಶತಕ ಬಾರಿಸುವ ಮೂಲಕ ಭಾರತದ ಕಿರಿಯ ಶತಕ ಎನಿಸಿಕೊಂಡಿದ್ದರು. ' T20I 100 23- # # ://./wm8Qeomdp8#IndiaAtAG22 ../3fOGU6eFXiಅಂತೆಯೇ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಕೀರ್ತಿಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಭಾರತ ಪರ ರೋಹಿತ್ ಶರ್ಮಾ ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿದ್ದಾರೆ. ಅವರು 35 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದರ ನಂತರ ಸೂರ್ಯಕುಮಾರ್ ಯಾದವ್ 45, ಕೆಎಲ್ ರಾಹುಲ್ 46 ಮತ್ತು ನಂತರ ಯಶಸ್ವಿ ಜೈಸ್ವಾಲ್ (48 ಎಸೆತ) ಶತಕ ಸಿಡಿಸಿದರು.ಇದನ್ನೂ ಓದಿ: ಐಸಿಸಿ ವಿಶ್ವ ಕಪ್ 2023: ತಂಡಗಳು, ಸಮಯ, ಸ್ಥಳದ ಸಂಪೂರ್ಣ ವೇಳಾಪಟ್ಟಿ ಇಂತಿದೆ...ನೇಪಾಳ ವಿರುದ್ಧ ಭಾರತಕ್ಕೆ 23ರನ್ ಗಳ ಜಯ, ಸೆಮೀಸ್ ಗೆ ಲಗ್ಗೆ ಇನ್ನು ಈ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ಭಾರತ ತಂಡ 23 ರನ್ ಗಳ ಅಂತರದ ಜಯ ದಾಖಲಿಸಿದೆ. ಮಾತ್ರವಲ್ಲದೇ ಸೆಮಿಫೈನಲ್ ನಲ್ಲಿ ಸ್ಥಾನ ಗಟ್ಟಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 202ರನ್ ಗಳಿಸಿತು. ಭಾರತದ ಪರ ಜೈಸ್ವಾಲ್ ಶತಕ ಸಿಡಿಸಿದರೆ, ನಾಯಕ ಋತುರಾಜ್ ಗಾಯಕ್ವಾಡ್ (25ರನ್) ಮತ್ತು ಶಿವಂ ದುಬೆ (ಅಜೇಯ 2ರನ್) ಮತ್ತು ರಿಂಕು ಸಿಂಗ್ (ಅಜೆಯೇ 37ರನ್) ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ದ್ವಿಶತಕದ ಗಡಿ ದಾಟಿಸಿದರು.ಭಾರತ ನೀಡಿದ 203ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನೇಪಾಳ ತಂಡ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 179ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಕೇವಲ 23ರನ್ ಗಳ ಅಂತರದಲ್ಲಿ ಸೋಲು ಕಂಡಿತು.