2ನೇ ಏಕದಿನ ಪಂದ್ಯ: ಮಾಕ್ರಾಮ್, ರೀಜಾ ಹೆಂಡ್ರಿಕ್ಸ್ ಅರ್ಧ ಶತಕ; ಟೀಂ ಇಂಡಿಯಾಗೆ ಗೆಲ್ಲಲು 279 ರನ್ ಗುರಿ! ಅತಿಥೇಯ ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 278 ರನ್ ಪೇರಿಸಿದೆ. ರಾಂಚಿ: ಅತಿಥೇಯ ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 278 ರನ್ ಪೇರಿಸಿದೆ. ರಾಂಚಿಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿದ್ದು ಟೀಂ ಇಂಡಿಯಾಗೆ ಗೆಲ್ಲಲು 279 ರನ್ ಗಳ ಗುರಿ ನೀಡಿದೆ. ದಕ್ಷಿಣ ಆಫ್ರಿಕಾ ಪರ ಮಲನ್ 25, ರೀಜಾ ಹೆಂಡ್ರಿಕ್ಸ್ 74, ಮಾಕ್ರಾಮ್ 79, ಕಾಲ್ಸೆನ್ 30 ಹಾಗೂ ಡೇವಿಡ್ ಮಿಲ್ಲರ್ ಅಜೇಯ 35 ರನ್ ಪೇರಿಸಿದ್ದಾರೆ. ಭಾರತದ ಪರ ಮೊಹಮ್ಮದ್ ಸಿರಾಜ್ 3, ವಾಷಿಂಗ್ಟನ್ ಸುಂದರ್, ಶಾಹಬಾಜ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದಿದ್ದಾರೆ.