ಐಸಿಸಿ ಏಕದಿನ ವಿಶ್ವಕಪ್ 2023: ಭಾರತ ವಿರುದ್ಧ ಡರಿಲ್ ಮಿಚೆಲ್ ಭರ್ಜರಿ ಬ್ಯಾಟಿಂಗ್, ದಾಖಲೆ ನಿರ್ಮಾಣ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ನ್ಯೂಜಿಲೆಂಡ್ ತಂಡದ ಡರಿಲ್ ಮಿಚೆಲ್ ಸ್ಫೋಟಕ ಶತಕ ಸಿಡಿಸಿ ದಾಖಲೆಗೆ ಪಾತ್ರರಾಗಿದ್ದಾರೆ. ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ನ್ಯೂಜಿಲೆಂಡ್ ತಂಡದ ಡರಿಲ್ ಮಿಚೆಲ್ ಸ್ಫೋಟಕ ಶತಕ ಸಿಡಿಸಿ ದಾಖಲೆಗೆ ಪಾತ್ರರಾಗಿದ್ದಾರೆ.ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ ಡರಿಲ್ ಮಿಚೆಲ್ 127 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 130 ರನ್ ಗಳನ್ನು ಸಿಡಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ ಗರಿಷ್ಠ ರನ್ ದಾಖಲಿಸಿದ ನ್ಯೂಜಿಲೆಂಡ್ ನ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್ 2023: ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ಕಟ್ಟಿಹಾಕಿದ ಭಾರತಇದಕ್ಕೂ ಮೊದಲು 2022ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಮ್ ಲಾಥಮ್ ಅಜೇಯ 145ರನ್ ಸಿಡಿಸಿದ್ದರು. ಇದು ಭಾರತದ ವಿರುದ್ಧ ದಾಖಲಾದ ನ್ಯೂಜಿಲೆಂಡ್ ಬ್ಯಾಟರ್ ನ ಗರಿಷ್ಠ ಮೊತ್ತವಾಗಿದೆ. ಬಳಿಕ 2023ರಲ್ಲಿ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಮೈಕೆಲ್ ಬ್ರೇಸ್ ವೆಲ್ 140ರನ್ ಸಿಡಿಸಿದ್ದರು. 2023ರಲ್ಲಿ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಡೆವಾನ್ ಕಾನ್ವೆ 138 ರನ್ ಗಳಿಸಿದ್ದರು. ಇದೀಗ ಡರಿಲ್ ಮಿಚೆಲ್ ಇಂದು ಗಳಿಸಿದ 130ರನ್ ಅವರನ್ನು ಈ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿಸಿದೆ. 145* - , , 2022 140 - , , 2023 138 - , , 2023 130 - , , 2023 120 - , , 1999