2023: ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳ ನೇಮಕ, ಭಾರತದ ವಿರುದ್ಧ ಕಳಪೆ ಇತಿಹಾಸ! ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಇದರ ನಡುವೆಯೇ ಐಸಿಸಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅಹ್ಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಇದರ ನಡುವೆಯೇ ಐಸಿಸಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ.ಭಾರತ ಮತ್ತು ಆಸ್ಟ್ರೇಲಿಯಾ ( ) ನಡುವೆ ನಡೆಯಲ್ಲಿರುವ 2023 ರ ಏಕದಿನ ವಿಶ್ವಕಪ್ನ ( 2023) ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ( ) ಸಜ್ಜಾಗಿದೆ. ಈ ಉಭಯ ತಂಡಗಳು ಬರೋಬ್ಬರಿ 20 ವರ್ಷಗಳ ನಂತರ ಐಸಿಸಿ ಟೂರ್ನಿಯ ಫೈನಲ್ ಪಂದ್ಯ ಆಡುತ್ತಿವೆ. ಭಾರತವೇ ಫೈನಲ್ ಪಂದ್ಯದ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದರೂ ಅಭಿಮಾನಿಗಳಿಗೆ ಮಾತ್ರ ಅದೊಂದು ಆತಂಕ ಕಾಡಲಾರಂಭಿಸಿದೆ. ವಾಸ್ತವವಾಗಿ ಐಸಿಸಿ, ಫೈನಲ್ ಪಂದ್ಯಕ್ಕೆ ಅಂಪೈರ್ಗಳ ಹೆಸರನ್ನು ಅಂತಿಮಗೊಳಿಸಿದೆ. ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಸೋಲುವುದು ಖಚಿತ ಎನ್ನುತ್ತಿದ್ದಾರೆ.ಇದನ್ನೂ ಓದಿ: 2011, 2015, 2019ರ ಬಳಿಕ ಮತ್ತೆ ವಿಶ್ವಕಪ್ ಮೇಲೆ ಕಣ್ಣಿಟ್ಟ ಆಸ್ಟ್ರೇಲಿಯಾ; ಮರುಕಳಿಸುವುದೇ ಇತಿಹಾಸ?ಹೌದು.. ಬಹು ನಿರೀಕ್ಷಿತ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳ ಹೆಸರನ್ನು ಐಸಿಸಿ ಅಂತಿಮಗೊಳಿಸಿದ್ದು, ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಈ ಆತಂಕಕ್ಕೆ ಕಾರಣವಾಗಿರುವ ಆ ಅಂಪೈರ್ಗಳು ಯಾರು? ಅಭಿಮಾನಿಗಳ ಆತಂಕಕ್ಕೇನು ಕಾರಣ?ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳು ಬಹು ನಿರೀಕ್ಷಿತ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳ ಹೆಸರನ್ನು ಐಸಿಸಿ ಅಂತಿಮಗೊಳಿಸಿದ್ದು, ರಿಚರ್ಡ್ ಕೆಟಲ್‌ಬರೋ, ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯಲ್ ವಿಲ್ಸನ್ ಅವರನ್ನು ಫೈನಲ್ ಪಂದ್ಯಕ್ಕೆ ತೀರ್ಪುಗಾರರನ್ನಾಗಿ ನೇಮಿಸಿದೆ. ನವೆಂಬರ್ 19, ಭಾನುವಾರದಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಲಿದ್ದಾರೆ. ಇಂಗ್ಲಿಷ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ಹೆಸರಿಸಲಾಗಿದ್ದು, ಟ್ರಿನಿಡಾಡ್ ಮತ್ತು ಟೊಬಾಗೋದ ಜೋಯಲ್ ವಿಲ್ಸನ್ ಮೂರನೇ ಅಂಪೈರ್‌ನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಪೈಕ್ರಾಫ್ಟ್ ಅವರು ಫೈನಲ್‌ನಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಇದನ್ನೂ ಓದಿ: 2023 ಪಂದ್ಯ ವೀಕ್ಷಣೆಗೆ ಚಿತ್ರಮಂದಿರಗಳಲ್ಲಿ ಅವಕಾಶ; ಅಡ್ವಾನ್ಸ್ ಬುಕ್ಕಿಂಗ್ ಗೆ ಉತ್ತಮ ಪ್ರತಿಕ್ರಿಯೆವಿವಾದಿತ ಅಂಪೈರ್ ಇರುವ ಪಂದ್ಯಗಳಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು! ವಾಸ್ತವವಾಗಿ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿರುವ ಆ ಇಬ್ಬರು ಅಂಪೈರ್ಗಳೆಂದರೆ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್. ಅದರಲ್ಲೂ ರಿಚರ್ಡ್ ಕೆಟಲ್‌ಬರೋ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಡಿರುವ 5 ನಾಕೌಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ದುರಾದೃಷ್ಟವಶಾತ್ ಆ ಐದೂ ಪಂದ್ಯಗಳಲ್ಲಿಯೂ ಭಾರತ ತಂಡ ಸೋತಿದೆ. ರಿಚರ್ಡ್ ಕೆಟಲ್‌ಬರೋ ಅವರ ಅಂಪೈರಿಂಗ್ನಲ್ಲಿ ಟೀಂ ಇಂಡಿಯಾ 2014ರ ಟಿ20 ವಿಶ್ವಕಪ್ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2019ರ ವಿಶ್ವಕಪ್ ಸೆಮಿಫೈನಲ್ ಆಡಿದ್ದು, ಈ ಐದೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಸೋಲನುಭವಿಸಿತ್ತು. ವಾಸ್ತವವಾಗಿ ಈ ಇಬ್ಬರೂ 2019 ರಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ತೀರ್ಪುಗಾರರಾಗಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.ಇದೀಗ ಟೀಂ ಇಂಡಿಯಾ 11 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದು, ರಿಚರ್ಡ್ ಕೆಟಲ್‌ಬರೋ ಅಂಪೈರ್ ಆಗಿ ನೇಮಕಗೊಂಡಿರುವುದು ಭಾರತೀಯ ಅಭಿಮಾನಿಗಳ ಭಯವನ್ನು ಹೆಚ್ಚಿಸಿದೆ.ಮೊದಲ ಬಾರಿಗೆ ರಿಚರ್ಡ್ ಕೆಟಲ್‌ಬರೋ ಪಂದ್ಯದಲ್ಲಿ ಗೆದ್ದ ಭಾರತ ಆದಾಗ್ಯೂ ಸಮಾಧಾನಕರ ಸಂಗತಿಯೆಂದರೆ, ಈ ಬಾರಿಯ ವಿಶ್ವಕಪ್ನಲ್ಲಿ ಇವರ ಅಂಪೈರಿಂಗ್ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಹಿಂದೆ ಅಂದರೆ ನವೆಂಬರ್ 15 ರಂದು ಮುಂಬೈನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ರಿಚರ್ಡ್ ಇಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಆ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಅಂತೆಯೇ ಮತ್ತೋರ್ವ ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದೇ ವಿಶ್ವಕಪ್ ಟೂರ್ನಿಯ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲೂ ಅಂಪೈರಿಂಗ್ ಮಾಡಿದ್ದರು.ಇದನ್ನೂ ಓದಿ: 2023: ಫೈನಲ್ ಗೆ ಕೌಂಟ್ ಡೌನ್, ಸೂಪರ್ ಸಂಡೇಯಲ್ಲಿ ಹೊಸ ಇತಿಹಾಸ ಸೃಷ್ಟಿಗೆ ಭಾರತ ಸಜ್ಜು!ಆ ಪಂದ್ಯವನ್ನೂ ಭಾರತ ಗೆದ್ದಿತ್ತು. ಅಷ್ಟು ಮಾತ್ರವಲ್ಲದೇ ಅಂದಿನ ಪಂದ್ಯದಲ್ಲಿ ಶತಕದಂಚಿನಲ್ಲಿದ್ದ ಭಾರತ ತಂಡದ ವಿರಾಟ್ ಕೊಹ್ಲಿಗೆ ಶತಕ ಪೂರ್ತಿ ಮಾಡದಂತೆ ತಡೆಯಲು ಬಾಂಗ್ಲಾದೇಶ ಬೌಲರ್ ನಜ್ಮುಲ್ ಹೊಸೈನ್ ಶಾಂತೋ ವೈಡ್ ಎಸೆದಿದ್ದರು. ಆದರೆ ಇದನ್ನು ಇದೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ವೈಡ್ ಎಂದು ಘೋಷಿಸದೇ ಪರೋಕ್ಷವಾಗಿ ಕೊಹ್ಲಿ ಶತಕಕ್ಕೆ ನೆರವಾಗಿದ್ದರು. ಈ ಬಗ್ಗೆ ಭಾರಿ ಪರ-ವಿರೋಧ ಚರ್ಚೆಗಳಾಗಿದ್ದವು. ಬಳಿಕ ಅಂಪೈರ್ ತೀರ್ಪು ಐಸಿಸಿ ನಿಯಮಗಳ ಅನ್ವಯ ಸರಿಯಾಗಿತ್ತು.