ಸಾಲು ಸಾಲು ಅವಕಾಶಗಳನ್ನು ವ್ಯರ್ಥ ಮಾಡುತ್ತಿದ್ದೀರಿ: ರಿಷಬ್ ಪಂತ್'ಗೆ ಎಚ್ಚರಿಕೆ ನೀಡಿದ ಶ್ರೀಕಾಂತ್ ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ತಮ್ಮ ಅವಕಾಶಗಳನ್ನು 'ವ್ಯರ್ಥ' ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಆಟವನ್ನು ಪುನರುಜ್ಜೀವನಗೊಳಿಸಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದು ಬಿಸಿಸಿಐನ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಎಚ್ಚರಿಸಿದ್ದಾರೆ. ನವದೆಹಲಿ: ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ತಮ್ಮ ಅವಕಾಶಗಳನ್ನು 'ವ್ಯರ್ಥ' ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಆಟವನ್ನು ಪುನರುಜ್ಜೀವನಗೊಳಿಸಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದು ಬಿಸಿಸಿಐನ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಎಚ್ಚರಿಸಿದ್ದಾರೆ.ಈ ವರ್ಷ ಸೀಮಿತ-ಓವರ್‌ಗಳ ಕ್ರಿಕೆಟ್‌ನಲ್ಲಿ ಪಂತ್ ಅಧೀನರಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೇವಲ ಒಂದು ಅರ್ಧ ಶತಕವನ್ನು ಗಳಿಸಿದರು. 2022 ರಲ್ಲಿ ಆಡಿದ 21 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ 30 ರನ್‌ ಗಡಿಯನ್ನು ದಾಟಿದ್ದಾರೆ ಎಂದರು. ಈ ವರ್ಷ ಆಡಿದ ಏಕದಿನ ಪಂದ್ಯಗಳಲ್ಲಿ 25ರ ಹರೆಯದ ಪಂತ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಬಾರಿಸಿದ್ದಾರೆ. 'ಬಹುಶಃ ಆಯ್ಕೆ ಸಮಿತಿ ಆತನಿಗೆ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಹೇಳಬೇಕಿತ್ತು. ಇದಲ್ಲದ್ದಿದ್ದರೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಬಿಟ್ಟು ಸ್ವದೇಶಿ ಕ್ರಿಕೆಟ್ ನಲ್ಲಿ ಆಡಿ ಎಂದು ಹೇಳಬಹುದು. ಸಮಿತಿ ಅವನನ್ನು ಚೆನ್ನಾಗಿ ನಿಭಾಯಿಸಲಿಲ್ಲ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ ಚೀಕಿ ಚೀಕಾದಲ್ಲಿ ಹೇಳಿದ್ದಾರೆ.ಇದನ್ನೂ ಓದಿ: ಭಾರತ ನ್ಯೂಜಿಲೆಂಡ್ 2ನೇ ಏಕದಿನಕ್ಕೆ ಮಳೆ ಅಡ್ಡಿ; ಪಂದ್ಯ ರದ್ದುನ್ಯೂಜಿಲೆಂಡ್ ವಿರುದ್ಧದ T20I ಸರಣಿಯಲ್ಲಿ ಪಂತ್ ಕೇವಲ 17 ರನ್ ಗಳಿಸಿದ್ದಾರೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ 15 ರನ್ ಗಳಿಸಿ ಔಟಾದರು. 'ನೀವು ಈ ಅವಕಾಶಗಳನ್ನು ಹಾಳು ಮಾಡುತ್ತಿದ್ದೀರಿ. ನೀವು ಅಂತಹ ಪಂದ್ಯಗಳಲ್ಲಿ ಕುಸಿದು ಹೋದರೆ ಎಷ್ಟು ಸರಿ? ಮುಂದೆ ವಿಶ್ವಕಪ್ ಬರುತ್ತಿದೆ. ಈಗಾಗಲೇ ಬಹಳಷ್ಟು ಜನರು ಪಂತ್ ರನ್ ಗಳಿಸಲು ಪರದಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇಂತಹ ಮಾತುಗಳಿಂದ ಪಂತ್ ಮೇಲೆ ಒತ್ತಡ ಶುರವಾಗುತ್ತದೆ. ಹೀಗಾಗಿ ತನ್ನನ್ನು ತಾನೇ ಮರುಶೋಧಿಸಿಕೊಳ್ಳಬೇಕು. ಸ್ವಲ್ಪ ಹೊತ್ತು ನಿಂತು ಆಟವಾಡಬೇಕು ಎಂದು ಸಲಹೆ ನೀಡಿದರು.ಕ್ರೈಸ್ಟ್‌ ಚರ್ಚ್‌ನಲ್ಲಿ ಬುಧವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲ. ನ್ಯೂಜಿಲ್ಯಾಂಡ್ ಗೆದ್ದರೆ ಸರಣಿ ಕೈವಶ.