ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 35 ರನ್ ಗಳ ಭರ್ಜರಿ ಜಯ, ಸೆಮಿ ಫೈನಲ್ ಗೆ ಪ್ರವೇಶ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು 35 ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ ಸೆಮಿ ಫೈನಲ್ ಗೆ ಅಧಿಕೃತ ಪ್ರವೇಶ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಅಡಿಲೇಡ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು 35 ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ ಸೆಮಿ ಫೈನಲ್ ಗೆ ಅಧಿಕೃತ ಪ್ರವೇಶ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.ಅಡಿಲೇಡ್ ಓವಲ್ ನಲ್ಲಿ ನಡೆದ ಸೂಪರ್ 12 ನ ಗ್ರೂಪ್ 1 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಐರ್ಲೆಂಡ್ ತಂಡವನ್ನು 35ರನ್ ಗಳ ಅಂತರದಲ್ಲಿ ಮಣಿಸಿದೆ. ಟಾಸ್ ಗೆದ್ದರೂ ನ್ಯೂಜಿಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಐರ್ಲೆಂಡ್ ನೀಡಿತು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ (61) ಮತ್ತು ಡರಿಲ್ ಮಿಚೆಲ್ (31) ಅವರ ಸಮಯೋಚಿಟ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185ರನ್ ಗಳಿಸಿತು. ಐರ್ಲೆಂಡ್ ಪರ ಜೋಷುವಾ ಲಿಟಲ್ 3 ವಿಕೆಟ್ ಪಡೆದು ಮಿಂಚಿದರೆ, ಡೆಲನಿ 2 ಮತ್ತು ಮಾರ್ಕ್ ಡೇರ್ 1 ವಿಕೆಟ್ ಪಡೆದರು. #T20WorldCup 2022 -finalsಗೆಲ್ಲಲು 186 ರನ್ ಗಳ ಸವಾಲಿನ ಗುರಿ ಪಡೆದ ಐರ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಪಾಲ್ ಸ್ಟರ್ಲಿಂಗ್ (37) ಮತ್ತು ನಾಯಕ ಆಂಡ್ರ್ಯೂ ಬಾಲ್ಬಿರ್ನಿ (30) 68 ರನ್ ಗಳ ಜೊತೆಯಾಟವಾಡಿತು. ಆದರೆ ಈ ಹಂತದಲ್ಲಿ ನಾಯಕ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಪತನವಾಯಿತು. ಬಳಿಕ ಅಕ್ಷರಶಃ ಆರಂಭವಾಗಿದ್ದು ಐರ್ಲೆಂಡ್ ದಾಂಡಿಗರ ಪೆವಿಲಿಯನ್ ಪರೇಡ್.. ಬಾಲ್ಬಿರ್ನಿ ವಿಕೆಟ್ ಬೆನ್ನಲ್ಲೇ ಪಾಲ್ ಸ್ಟರ್ಲಿಂಗ್, ಲಾರ್ಕನ್ ಟಕ್ಕರ್ (13), ಹ್ಯಾರಿ ಟೆಕ್ಟರ್ (2) ವಿಕೆಟ್ ಪತನವಾಯಿತು. ಈ ವೇಳೆ ಅಕ್ಷರಶಃ ಐರ್ಲೆಂಡ್ ಪಾಳಯದಲ್ಲಿ ಸೋಲಿನ ಭೀತಿ ಸೃಷ್ಟಿಯಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ಡೆಲನಿ ಮತ್ತು ಜಾರ್ಜ್ ಡಾಕ್ರೆಲ್ 33 ರನ್ ಗಳ ಜೊತೆಯಾಟ ನೀಡಿ ಐರ್ಲೆಂಡ್ ಬೆನ್ನೆಲುಬಾಗಿ ನಿಂತರು. ಇದನ್ನೂ ಓದಿ: ಟಿ-20 ವಿಶ್ವಕಪ್: ಮತ್ತೆ ಫಾರ್ಮ್ ಗೆ ಮರಳಿದ ಕೆ.ಎಲ್. ರಾಹುಲ್ ಕೊಂಡಾಡಿದ ಗೌತಮ್ ಗಂಭೀರ್!ಈ ಹಂತದಲ್ಲಿ ದಾಳಿಗಿಳಿದ ಕಿವೀಸ್ ಲಾಕಿ ಫರ್ಗುಸನ್ 2 ವಿಕೆಟ್ ಪಡೆದು ಐರ್ಲೆಂಡ್ ಮರ್ಮಾಗಾತ ನೀಡಿದರು. ಅಂತಿಮವಾಗಿ ಐರ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 35 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.