ಸುರೇಶ್‌ ರೈನಾ ವಿರುದ್ಧ ಶಾಂತ ಸ್ವಭಾವದ ಧೋನಿ ಗರಂ ಆಗಿದ್ದ ಪ್ರಸಂಗವನ್ನು ಸ್ಮರಿಸಿದ ಆರ್‌ಪಿ ಸಿಂಗ್‌ ಮಹೇಂದ್ರ ಸಿಂಗ್‌ ಧೋನಿ ಭಾರತದ ನಾಯಕತ್ವ ವಹಿಸಿಕೊಂಡ ಆರಂಭದಿಂದ ಕೊನೆಯವರೆಗೂ ಅತ್ಯಂತ ತಾಳ್ಮೆ ಹಾಗೂ ಶಾಂತ ಸ್ವಭಾವದಿಂದ ತಂಡವನ್ನು ಮುನ್ನಡೆಸಿದ್ದರು. ಈ ಕಾರಣದಿಂದಲೇ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಬಿರುದು ನೀಡಲಾಯಿತು. ಆದರೂ, ಒಮ್ಮೆ ಎಂಎಸ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು ಎಂದು ಮಾಜಿ ವೇಗಿ ಆರ್‌ಪಿ ಸಿಂಗ್‌ ಹೇಳಿದ್ದಾರೆ. ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಭಾರತದ ನಾಯಕತ್ವ ವಹಿಸಿಕೊಂಡ ಆರಂಭದಿಂದ ಕೊನೆಯವರೆಗೂ ಅತ್ಯಂತ ತಾಳ್ಮೆ ಹಾಗೂ ಶಾಂತ ಸ್ವಭಾವದಿಂದ ತಂಡವನ್ನು ಮುನ್ನಡೆಸಿದ್ದರು. ಈ ಕಾರಣದಿಂದಲೇ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಬಿರುದು ನೀಡಲಾಯಿತು. ಆದರೂ, ಒಮ್ಮೆ ಎಂಎಸ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು ಎಂದು ಮಾಜಿ ವೇಗಿ ಆರ್‌ಪಿ ಸಿಂಗ್‌ ಹೇಳಿದ್ದಾರೆ.ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹಾಗೂ ಮಾಜಿ ಮಧ್ಯಮ ಕ್ರಮಾಂಕದ ವೇಗಿ ಆರ್‌ಪಿ ಸಿಂಗ್‌ ಅವರು ಕ್ರಿಕೆಟ್‌ ವಲಯದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಒಮ್ಮೆ ಎಂಎಸ್ ಧೋನಿ, ಸಹ ಆಟಗಾರ ಸುರೇಶ್‌ ರೈನಾ ಅವರ ಮೇಲೆ ಗರಂ ಆಗಿದ್ದ ಘಟನೆಯೊಂದನ್ನು ಮಾಜಿ ವೇಗಿ ಸ್ಮರಿಸಿಕೊಂಡಿದ್ದಾರೆ.ಕ್ರಿಕೆಟ್‌. ಕಾಮ್‌ ಜತೆ ಮಾತನಾಡಿದ ಆರ್‌ಪಿ ಸಿಂಗ್‌, ಶ್ರೀಲಂಕಾ ಪ್ರವಾಸದ ಪಂದ್ಯವೊಂದರಲ್ಲಿ ಕವರ್ಸ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಸುರೇಶ್‌ ರೈನಾ ಮುಂದಕ್ಕೆ ಬರುತ್ತಿದ್ದರು ಹಾಗೂ ಧೋನಿ ತುಂಬಾ ಹತ್ತಿರ ಬರದಂತೆ ರೈನಾಗೆ ಮೊದಲೇ ಹೇಳಿದ್ದರು. ನಂತರ ಹಲವು ಎಸೆತಗಳ ಬಳಿಕ ಸುರೇಶ್‌ ರೈನಾ ಫೀಲ್ಡಿಂಗ್‌ನಲ್ಲಿ ಚೆಂಡನ್ನು ಬಿಟ್ಟಿದ್ದರು. ತಾನು ಹೇಳಿದ್ದರೂ ಮುಂದೆ ಬಂದು ಚೆಂಡನ್ನು ಬಿಟ್ಟಿದ್ದರಿಂದ ರೈನಾ ಮೇಲೆ ಧೋನಿ ಅಂದು ಸಿಟ್ಟು ಮಾಡಿಕೊಂಡಿದ್ದರು ಎಂದು ಹೇಳಿದರು.ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ 9 ತಿಂಗಳ ಬಳಿಕ ಆರ್‌ಪಿ ಸಿಂಗ್‌ ಮಾಡಿದ್ದರು. ತಮ್ಮ ವೃತ್ತಿ ಜೀವನದ ಅಂತ್ಯದವರೆಗೂ ಅವರು ಎಂಎಸ್‌ ಧೋನಿ ನಾಯಕತ್ವದಲ್ಲಿಯೇ ಆಡಿದ್ದರು. ಮೊದಲನೇ ಬಾರಿ ಧೋನಿ ಹೇಗೆ ಗಮನ ಸೆಳೆದಿದ್ದರು ಎಂಬ ಬಗ್ಗೆ ಸ್ಮರಿಸಿಕೊಂಡ ಆರ್‌ಪಿ ಸಿಂಗ್‌, ಮಾಜಿ ನಾಯಕನನ್ನು ಮೊದಲ ಬಾರಿ ದೇಶಿ ಕ್ರಿಕೆಟ್‌ನಲ್ಲಿ ನೋಡಿದ್ದರು ಎಂಬುದನ್ನು ತಿಳಿಸಿದ್ದಾರೆ.ದೇವಧರ್ ಟ್ರೋಫಿ ದೇಶಿ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಎಂಎಸ್‌ ಧೋನಿಯನ್ನು ಭೇಟಿಯಾಗಿದ್ದೆ. ಪೂರ್ವ ವಲಯದಲ್ಲಿ ಆಡುವ ಅವಕಾಶ ಪಡೆಯದೇ ಇದ್ದರೂ, ಬೆಂಗಳೂರಿನಲ್ಲಿ ನಡೆದಿದ್ದ ಶಿಬಿರದಲ್ಲಿ ಭೇಟಿ ಮಾಡಿದ್ದೆ. ಆದರೆ ನಾನು ಅವರ ಬಗ್ಗೆ ತಿಳಿದಿದ್ದೆ ಏಕೆಂದರೆ ಯುಪಿ ಮತ್ತು ಬಿಹಾರದಲ್ಲಿ ಹಲವಾರು ಅನಧಿಕೃತ ಟೂರ್ನಿಗಳು ನಡೆಯುತ್ತಿದ್ದವು ಮತ್ತು ನಾವು ಗ್ವಾಲಿಯರ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದಾಗ ಅವರು ಆಗಲೇ ದೊಡ್ಡ ಹೆಸರು ಮಾಡಿದ್ದರು ಎಂದು ಹೇಳಿದರು.