2023: ಲಖನೌ ವಿರುದ್ಧ 7 ರನ್ ಗಳ ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್! ಐಪಿಎಲ್ 2023ರ 30ನೇ ಪಂದ್ಯದಲ್ಲಿ ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 7 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಲಖನೌ: ಐಪಿಎಲ್ 2023ರ 30ನೇ ಪಂದ್ಯದಲ್ಲಿ ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 7 ರನ್ ಗಳ ರೋಚಕ ಗೆಲುವು ಸಾಧಿಸಿದೆ.ಲಖನೌದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಿತ್ತು. ಗುಜರಾತ್ ನೀಡಿದ ಸಾಧಾರಣ ಮೊತ್ತ ಬೆನ್ನಟ್ಟಿದ ಲಖನೌ ತಂಡ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಷ್ಟೇ ಸಾಧ್ಯವಾಗಿದ್ದು 7 ರನ್ ಗಳಿಂದ ಗುಜರಾತ್ ಗೆ ಶರಣಾಯಿತು.ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ ಅರ್ಧಶತಕದ ಹಾಗೂ ವೃದ್ಧಿಮಾನ್ ಸಾಹಾ 47 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಪೇರಿಸಿತ್ತು.ಇದನ್ನೂ ಓದಿ: ಐಪಿಎಲ್ 2023: ಹೈದರಾಬಾದ್ ವಿರುದ್ಧ ಚೆನ್ನೈಗೆ 7 ವಿಕೆಟ್ ಗಳ ಭರ್ಜರಿ ಗೆಲುವುಲಖನೌ ಪರ ಕೆಎಲ್ ರಾಹುಲ್ 68 ರನ್ ಪೇರಿಸಿದರು. ಇನ್ನುಳಿದಂತೆ ಕೈಲ್ ಮೇಯರ್ಸ್ 24 ಹಾಗೂ ಕೃನಾಲ್ ಪಾಂಡ್ಯ 23 ರನ್ ಬಾರಿಸಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮನ್ ಗಳು ರನ್ ಬಾರಿಸುವಲ್ಲಿ ವಿಫಲರಾಗಿದ್ದು ಸೋಲಿನ ಕಹಿ ಅನುಭವಿಸಿದರು. ಈ ಪಂದ್ಯದ ಗೆಲುವಿನೊಂದಿಗೆ ಗುಜರಾತ್ ತಂಡವು ಇದೀಗ 8 ಅಂಕಗಳೊಂದಿಗೆ ಅಂಕಪಟ್ಟಿ ನಾಲ್ಕನೇ ಸ್ಥಾನದಲ್ಲಿದೆ. ಈ ಸೋಲಿನ ನಂತರವೂ ಲಖನೌ ತಂಡವು 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.