2024: ಐಪಿಎಲ್ ಇತಿಹಾಸದಲ್ಲೆ ದಾಖಲೆಯ ರನ್ ಗಳಿಸಿದ ಹೈದರಾಬಾದ್ ತಂಡ! ಬೆಂಗಳೂರಿನಲ್ಲಿ ನಡೆಯುತ್ತಿರುವ - ನಡುವಿನ ಐಪಿಎಲ್-2024 ಪಂದ್ಯದಲ್ಲಿ ಹೈದರಾಬಾದ್ ತಂಡ ದಾಖಲೆಯ ಗರಿಷ್ಠ ರನ್ ಗಳಿಸಿದೆ. ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ - ನಡುವಿನ ಐಪಿಎಲ್-2024 ಪಂದ್ಯದಲ್ಲಿ ಹೈದರಾಬಾದ್ ತಂಡ ದಾಖಲೆಯ ಗರಿಷ್ಠ ರನ್ ಗಳಿಸಿದೆ.ಆರ್ ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್ ಗಳಲ್ಲಿ ಆತಿಥೇಯ ತಂಡ 3 ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳಿಸಿದೆ.ಇದು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದಿದ್ದ ಗರಿಷ್ಠ ಸ್ಕೋರ್ ಸಹ ಸನ್ ರೈಸರ್ಸ್ ಹೈದರಾಬಾದ್ ತಂಡದ್ದೇ ಆಗಿದ್ದು, ಆರ್ ಸಿಬಿ ವಿರುದ್ಧವೇ ಈ ಹಿಂದಿನ ಬಾರಿಯೂ ಗರಿಷ್ಠ ಸ್ಕೋರ್ ದಾಖಲಿಸಿತ್ತು.ಇದೇ ಟೂರ್ನಿಯಲ್ಲಿ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗರಿಷ್ಠ ಸ್ಕೋರ್ ದಾಖಲಿಸಿತ್ತು. ಗರಿಷ್ಠ ರನ್ ಗಳಿಸಿರುವ ತಂಡಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಇದೆ.