T20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಸೂರ್ಯಕುಮಾರ್ ಯಾದವ್, ಸ್ಮೃತಿ ಮಂದಾನ ನಾಮನಿರ್ದೇಶನ! ಭಾರತದ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹಾಗೂ ಸ್ಮೃತಿ ಮಂದಾನ ಐಸಿಸಿ 2022ರ ವರ್ಷದ ಪುರುಷರ T20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹಾಗೂ ಸ್ಮೃತಿ ಮಂದಾನ ಐಸಿಸಿ 2022ರ ವರ್ಷದ ಪುರುಷರ T20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಸೂರ್ಯ ಅವರಲ್ಲದೆ, ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ಸ್ಯಾಮ್ ಕುರ್ರಾನ್, ಜಿಂಬಾಬ್ವೆ ಆಫ್ ಸ್ಪಿನ್ ಆಲ್‌ರೌಂಡರ್ ಸಿಕಂದರ್ ರಜಾ ಮತ್ತು ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.ಸೂರ್ಯಕುಮಾರ್ 2022ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು. 360-ಡಿಗ್ರಿ ಸ್ಟ್ರೋಕ್‌ಪ್ಲೇ ಮೂಲಕ ಸೂರ್ಯಕುಮಾರ್ ಖ್ಯಾತಿ ಗಳಿಸಿದ್ದರು. ಅಲ್ಲದೆ T20I ಗಳಲ್ಲಿ ಒಂದು ವರ್ಷದಲ್ಲಿ 1000ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.ಇದನ್ನೂ ಓದಿ: ಕೇವಲ ರನ್ ಗಳಿಸಿದ ಮಾತ್ರಕ್ಕೆ ಕಮ್ ಬ್ಯಾಕ್ ಸಾಧ್ಯವಿಲ್ಲ, ಬೊಜ್ಜು ಕರಗಿಸಿ: ಪಂತ್ ಗೆ ಬಿಸಿಸಿಐ ಎಚ್ಚರಿಕೆ?ಸೂರ್ಯ 46.56 ಸರಾಸರಿಯಲ್ಲಿ 1164 ರನ್‌ ಪೇರಿಸಿದ್ದಾರೆ. ಅಲ್ಲದೆ 187.43 ರ ಪ್ರಚಂಡ ಸ್ಟ್ರೈಕ್ ರೇಟ್‌ನೊಂದಿಗೆ ಹೆಚ್ಚಿನ ರನ್ ಗಳಿಸಿದರು. 2022ರಲ್ಲಿ ಅವರು ಗರಿಷ್ಠ 68 ಸಿಕ್ಸರ್‌ಗಳನ್ನು ಬಾರಿಸಿದ್ದರು. ವರ್ಷವಿಡೀ 2 ಶತಕ, 9 ಅರ್ಧಶತಕಗಳೊಂದಿಗೆ, ಸೂರ್ಯಕುಮಾರ್ ನಿಸ್ಸಂದೇಹವಾಗಿ ವಿಶ್ವದ ನಂಬರ್ ಒನ್ T20 ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ಐಸಿಸಿ ಟಿ20 ಮಹಿಳಾ ವಿಭಾಗದಲ್ಲಿ ಭಾರತದ ಸ್ಮೃತಿ ಮಂದಾನ, ಪಾಕಿಸ್ತಾನದ ಆಲ್ ರೌಂಡರ್ ನಿದಾ ದಾರ್, ನ್ಯೂಜಿಲ್ಯಾಂಡ್ ನ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾ ತಹ್ಲಿಯಾ ಮೆಕ್ ಗ್ರಾತ್ ರೇಸ್ ನಲ್ಲಿದ್ದಾರೆ.