ಬಿಸಿಸಿಐ ಹಳೆ ನಿಯಮ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅಸ್ತು, ಗಂಗೂಲಿ, ಜಯ್ ಶಾ ಅಧಿಕಾರಾವಧಿ ವಿಸ್ತರಣೆ ಬಿಸಿಸಿಐ ನಿಯಮಾವಳಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಬುಧವಾರ ಸುಗಮ ದಾರಿ ಮಾಡಿಕೊಟ್ಟಿದೆ. ನವದೆಹಲಿ: ಬಿಸಿಸಿಐ ನಿಯಮಾವಳಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಬುಧವಾರ ಸುಗಮ ದಾರಿ ಮಾಡಿಕೊಟ್ಟಿದೆ.ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಒಂದು ಅವಧಿ (3 ವರ್ಷ) ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಕೂಲಿಂಗ್ ಆಫ್ ಅವಧಿ ರದ್ದತಿ ಕುರಿತ ಬಿಸಿಸಿಐ ಮನವಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರ ನ್ಯಾಯಪೀಠ ಸ್ವೀಕರಿಸಿದೆ. ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಆರು ವರ್ಷ ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಮಾತ್ರ ಕೂಲಿಂಗ್ ಆಫ್ ಅವಧಿ ನಿಯಮ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂರು ವರ್ಷಗಳ ಅಧಿಕಾರ ಅವಧಿ ಮುಗಿದ ನಂತರ ಕೂಲಿಂಗ್ ಆಫ್ ಅವಧಿ ಅನ್ವಯಿಸಲಿದೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ. ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಸತತ 2 ಅವಧಿಗಳನ್ನು ಪೂರ್ಣಗೊಳಿಸಿದ ನಂತರ ಕೂಲಿಂಗ್ ಆಫ್ ಜಾರಿಗೆ ಬರುತ್ತದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.