2023: ಭಾರತ ಶ್ರೀಲಂಕಾ, ಟೀಂ ಇಂಡಿಯಾಗೆ ಜಾಗತಿಕ 4ನೇ ದಾಖಲೆಯ ಜಯ ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸಿಕ್ಕ 302 ರನ್ ಗಳ ಜಯ ಜಾಗತಿಕ ಏಕದಿನ ಕ್ರಿಕೆಟ್ ನಲ್ಲಿ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದು, ರನ್ ಗಳ ಲೆಕ್ಕಾಚಾರದಲ್ಲಿ ಇದು 4ನೇ ಅತೀ ದೊಡ್ಡ ಗೆಲುವಾಗಿದೆ. ಮುಂಬೈ: ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣ ( )ದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸಿಕ್ಕ 302 ರನ್ ಗಳ ಜಯ ಜಾಗತಿಕ ಏಕದಿನ ಕ್ರಿಕೆಟ್ ನಲ್ಲಿ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದು, ರನ್ ಗಳ ಲೆಕ್ಕಾಚಾರದಲ್ಲಿ ಇದು 4ನೇ ಅತೀ ದೊಡ್ಡ ಗೆಲುವಾಗಿದೆ.ಹೌದು.. ಭಾರತ ( ) ನೀಡಿದ್ದ 358 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ () ತಂಡ ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ ವಿರುದ್ಧ 302ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ದಾಖಲೆಯ ಜಯದ ಮೂಲಕ ಭಾರತ ತಂಡ ಜಾಗತಿಕ ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿದ್ದು, ಇದು ಜಾಗತಿಕ ಕ್ರಿಕೆಟ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ 4ನೇ ಅತೀ ದೊಡ್ಡ ಗೆಲುವಾಗಿದೆ.ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಜಹೀರ್ ಖಾನ್, ಶ್ರೀನಾಥ್ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ!ಈ ಹಿಂದೆ ಅಂದರೆ ಇದೇ ವರ್ಷ ತಿರುವನಂತಪುರದಲ್ಲಿ ಭಾರತ ತಂಡ ಇದೇ ಶ್ರೀಲಂಕಾ ತಂಡವನ್ನು 317ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ದಾಖಲಾದ ಅತೀ ದೊಡ್ಡ ಗೆಲುವಾಗಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡ ಇದ್ದು, ಇದೇ ವಿಶ್ವಕಪ್ ಟೂರ್ನಿ ( 2023)ಯಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ದಾಖಲಾದ 2ನೇ ಅತೀ ದೊಡ್ಡ ಗೆಲುವಾಗಿದೆ.ನಂತರದ ಸ್ಥಾನದಲ್ಲಿ ಜಿಂಬಾಬ್ವೆ ಇದ್ದು, ಇದೇ ವರ್ಷ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಯುಎಇ ವಿರುದ್ಧ ಜಿಂಬಾಬ್ವೆ 304ರನ್ ಗಳ ಅಂತರದಲ್ಲಿ ಜಯ ಗಳಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ದಾಖಲಾದ 3ನೇ ಅತೀ ದೊಡ್ಡ ಗೆಲುವಾಗಿದೆ.ಇದನ್ನೂ ಓದಿ: ಶ್ರೀಲಂಕಾ ವಿರುದ್ಧ 302 ರನ್ ಗಳ ಜಯ: ವಿಶ್ವಕಪ್-2023 ಸೆಮಿಫೈನಲ್ಸ್ ಪ್ರವೇಶಿಸಿದ ಭಾರತBiggest ( ) 317 - , 2023 309 - , , 2023 () 304 - , , 2023 302 - , , * 290 - , 2008 275 - , 2015 ()