ಮುಂದಿನ ವರ್ಷವೂ ಚೆನ್ನೈ ಪರ ಆಡಲಿದ್ದೇನೆ: ಐಪಿಎಲ್ ಸರಣಿಯ ಕಡೇ ಪಂದ್ಯಕ್ಕೆ ಮುನ್ನ ಧೋನಿ ಹೇಳಿದ್ದಿಷ್ಟು ತಾನು ಮುಂದಿನ ವರ್ಷದ ಐಪಿಎಲ್ ನಲ್ಲಿಯೂ ಆಡಲಿದ್ದೇನೆ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂಎಸ್. ಧೋನಿ ಖಚಿತಪಡಿಸಿದ್ದಾರೆ. ದುಬೈ: ತಾನು ಮುಂದಿನ ವರ್ಷದ ಐಪಿಎಲ್ ನಲ್ಲಿಯೂ ಆಡಲಿದ್ದೇನೆ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂಎಸ್. ಧೋನಿ ಖಚಿತಪಡಿಸಿದ್ದಾರೆ.ಇಂದು ನಡೆಯುತ್ತಿರುವ ಈ ವರ್ಷದ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್‌ಅಂತಿಮ ಪಂದ್ಯದ ಟಾಸ್‌ನ ವೇಳೆ ಧೋನಿ ಈ ಮಾತನ್ನು ಹೇಳಿದ್ದಾರೆ."ಹಳದಿ ಬಣ್ಣದ ಜೆರ್ಸಿಯಲ್ಲಿ ಇದು ನಿಮ್ಮ ಕಡೆಯ ಪಂದ್ಯವೆ? ಎಂದು ಕಮೆಂಟರ್ ಡ್ಯಾನಿ ಮಾರಿಸನ್ ಕೇಳಿದ ಪ್ರಶ್ನೆಗೆ "ಖಂಡಿತವಾಗಿ ಇಲ್ಲ" ಎಂದು ಧೋನಿ ಥಟ್ಟನೆ ಉತ್ತರಿಸಿದ್ದಾರೆ,ನಿರೀಕ್ಷೆಯಂತೆ, ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸೆನ್ಶೇಷನ್ ಸೃಷ್ಟಿಸಿದೆ.39 ವರ್ಷದ ಧೋನಿ ಆಗಸ್ಟ್ 15 ರಂದು ಅಂತರರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ನಂತರ ಕನಿಷ್ಠ ಎರಡುಋತುಗಳಲ್ಲಿ ಐಪಿಎಲ್ ಆಡಲಿದ್ದಾರೆಂದು ನಿರೀಕ್ಷಿಸಲಾಗಿತ್ತು, ಧೋನಿ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಟ್ಟ ಕಡೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು.ಚೆನ್ನೈ ಈ ವರ್ಷ ಅದರ ಕೆಟ್ಟ ಪ್ರದರ್ಶ್ನದಿಂದ ಅಂಕಪಟ್ಟಿಯಲ್ಲಿ ಕಡೇ ಸ್ಥಾನಕ್ಕೆ ತಲುಪಿದೆ.ಮೂರು ಬಾರಿ ಚಾಂಪಿಯನ್‌ ಆಗಿದ್ದ ಟೀಂ ಈ ಬಾರಿ ಪ್ಲೇ-ಆಫ್‌ಗೆ ಸಹ ಬಾರದಿರುವುದುಇದೇ ಮೊದಲು ಮುಂದಿನ ವರ್ಷ ಐಪಿಎಲ್ ಸಾಮಾನ್ಯವಾಗಿ ಏಪ್ರಿಲ್-ಮೇ ವಿಂಡೋದಲ್ಲಿ ನಡೆಯಲು ನಿರ್ಧರಿಸಲಾಗಿದೆ ಆದರೆ ವಿಶ್ವದಾದ್ಯಂತ ಹರಡಿರುವ ಕೋವಿಡ್ ಪರಿಸ್ಥಿತಿಯಿಂದ ದಿನಾಂಕಗಳು ಬದಲಾಗಬಹುದು.