ಕ್ರಿಕೆಟ್ ಇತಿಹಾದಲ್ಲೇ ನ್ಯೂಜಿಲೆಂಡ್ ಗೆ ಅತ್ಯಂತ ದೊಡ್ಡ ಹೀನಾಯ ಸೋಲು!! ಭಾರತದ ವಿರುದ್ಧ 372ರನ್ ಗಳ ಅಂತರದಲ್ಲಿ 2ನೇ ಟೆಸ್ಟ್ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರುವ ನ್ಯೂಜಿಲೆಂಡ್ ತಂಡ ಇತಿಹಾಸದಲ್ಲೇ ಅತೀ ದೊಡ್ಡ ಸೋಲು ಕಂಡಿದೆ. ಮುಂಬೈ: ಭಾರತದ ವಿರುದ್ಧ 372ರನ್ ಗಳ ಅಂತರದಲ್ಲಿ 2ನೇ ಟೆಸ್ಟ್ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರುವ ನ್ಯೂಜಿಲೆಂಡ್ ತಂಡ ಇತಿಹಾಸದಲ್ಲೇ ಅತೀ ದೊಡ್ಡ ಸೋಲು ಕಂಡಿದೆ.ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಆಟಗಾರ ಕೊಹ್ಲಿ!ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 372ರನ್ ಗಳ ಅಂತರದಲ್ಲಿ ಸೋಲಿಸಿತು. ಆ ಮೂಲಕ ಭಾರತ ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವು ಸಾಧಿಸಿದರೆ, ಅತ್ತ ನ್ಯೂಜಿಲೆಂಡ್ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದೆ.ಇದನ್ನೂ ಓದಿ: ಇತಿಹಾಸ ಬರೆದ ಭಾರತ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವುಈ ಹಿಂದೆ ಇದೇ ನ್ಯೂಜಿಲೆಂಡ್ ತಂಡ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 358ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ 2016ರಲ್ಲಿ ಇಂದೋರ್ ನಲ್ಲಿ ನ್ಯೂಜಿಲೆಂಡ್ ತಂಡ 321ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಅಂತೆಯೇ 2001ರಲ್ಲಿ ಪಾಕಿಸ್ತಾನ ವಿರುದ್ಧ ಆಕ್ಲೆಂಡ್ ನಲ್ಲಿ 299ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.ಇದನ್ನೂ ಓದಿ: ಅದ್ಭುತ ಬೌಲಿಂಗ್; 36 ವರ್ಷದ ಹಳೆಯ ದಾಖಲೆ ಪುಡಿ, ಒಂದೇ ಇನ್ನಿಂಗ್ಸ್ ನಲ್ಲಿ 3 ವಿಶ್ವ ದಾಖಲೆ ನಿರ್ಮಿಸಿದ ಕಿವೀಸ್ ಬೌಲರ್ ಎಜಾಜ್ ಪಟೇಲ್! ( ): 372 , 2021* 358 , ' 2007 321 , 2016 299 , 2001Biggest : & 198 , 2010 & 115 , 2012 & 109 , 1956 & 27 , 1955 372 , 2021*ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 6ನೇ ದೊಡ್ಡ ಗೆಲುವು ಇನ್ನು ಇಂದಿನ ಜಯ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 6ನೇ ದೊಡ್ಡ ಗೆಲುವಾಗಿದೆ. ಈ ಹಿಂದೆ 2010ರಲ್ಲಿ ನಾಗ್ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 198ರನ್ ಗಳ ಅಂತರದ ಜಯ ಸಾಧಿಸಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ ಅತೀ ದೊಡ್ಡ ಗೆಲುವಾಗಿದೆ. 2012ರಲ್ಲಿ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 115ರನ್ ಗೆಲುವು ಸಾಧಿಸಿತ್ತು. ಅಂತೆಯೇ 1956ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 109ರನ್ ಗಳ ಜಯ ಸಾಧಿಸಿತ್ತು. 1955ರಲ್ಲಿ ಮುಂಬೈನಲ್ಲಿ ಇನ್ನಿಂಗ್ಸ್ ಮತ್ತು 27ರನ್ ಗಳ ಅಂತರದ ಜಯ ಸಾಧಿಸಿತ್ತು.