ಪ್ಲೇ ಆಫ್ ತಲುಪಲು ವಿಫಲರಾದ ಶಿಖರ್ ಧವನ್ ಗೆ ತಂದೆಯಿಂದ ಥಳಿತ, ವಿಡಿಯೋ ನೋಡಿ! ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ವಿಫಲವಾಗಿದ್ದರಿಂದ ತಂಡದ ಸದಸ್ಯ ಶಿಖರ್ ಧವನ್ ಅವರನ್ನು ಅವರ ತಂದೆ ಥಳಿಸಿದ್ದಾರೆ. ಅಚ್ಚರಿಯಾಯ್ತಾ?.. ಆದ್ರೂ ಇದು ನಿಜ. ನವದೆಹಲಿ: ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ವಿಫಲವಾಗಿದ್ದರಿಂದ ತಂಡದ ಸದಸ್ಯ ಶಿಖರ್ ಧವನ್ ಅವರನ್ನು ಅವರ ತಂದೆ ಥಳಿಸಿದ್ದಾರೆ. ಅಚ್ಚರಿಯಾಯ್ತಾ?.. ಆದ್ರೂ ಇದು ನಿಜ. ಆದರೆ ಗಂಭೀರ ವಿಚಾರವಾಗಿ ಅಲ್ಲ, ಜಸ್ಟ್ ಫಾರ್ ತಮಾಷೆಗಾಗಿ.ಶಿಖರ್ ಧವನ್ ಆಗಾಗೇ ತಮಾಷೆ ವಿಡಿಯೋಗಳನ್ನ ಹಂಚಿಕೊಳ್ಳುತಿರುತ್ತಾರೆ. ಅದೇ ರೀತಿ ತಮ್ಮ ಅಭಿಮಾನಿಗಳನ್ನು ನಗಿಸಲು ಪ್ರಯತ್ನಿಸುತ್ತಿರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.ಇದನ್ನು ಓದಿ: ಐಪಿಎಲ್ 2022 ಎಲಿಮಿನೇಟರ್ ಪಂದ್ಯ: ರಜತ್ ಶತಕದ ನೆರವು, 14 ರನ್ ಗಳಿಂದ ಆರ್ ಸಿಬಿ ಗೆಲುವುಸಣ್ಣ ವೀಡಿಯೊದಲ್ಲಿ ಧವನ್ ಅವರ ತಂದೆ ತಮಾಷೆಯಾಗಿ ಹೊಡೆಯುವುದನ್ನು ನೋಡಬಹುದು. ಅವರ ಕುಟುಂಬ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಈ ವಿಡಿಯೋಗೆ “ನಾಕ್ ಔಟ್‌ಗೆ ಅರ್ಹತೆ ಪಡೆಯದಿದ್ದಕ್ಕಾಗಿ ನನ್ನ ತಂದೆಯಿಂದ ನಾಕ್ ಔಟ್” ಎಂದು ಧವನ್ ಶೀರ್ಷಿಕೆ ನೀಡಿದ್ದಾರೆ.ವೀಡಿಯೊಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೀಗೆ ಬರೆದಿದ್ದಾರೆ: “ಬಪ್ಪು ತೇರೆ ಸೆ ಬಿ ಉಪರ್ ಕಾ ನಟ ನಿಕ್ಲೇ.. ಕ್ಯಾ ಬಾತ್ ಹೈ.”ಪಂಜಾಬ್ ಕಿಂಗ್ಸ್ ನ ಹರ್‌ಪ್ರೀತ್ ಬ್ರಾರ್ ಅವರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ, “ಹಹಾ ಅಂಕಲ್ ಆನ್ ಫೈರ್ ಪಜಿ” ಎಂದು ಹೇಳಿದ್ದಾರೆ.ಶಿಖರ್ ಧವನ್ ಅವರು ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ನಿಂದ ಉತ್ತಮ ಪ್ರದರ್ಶನ ನೀಡಿದ್ದರೂ ಅವರ ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲು ಅರ್ಹತೆ ಪಡೆಯಲಿಲ್ಲ.ಪಂಜಾಬ್ ಕಿಂಗ್ಸ್ ಏಳು ಗೆಲುವುಗಳೊಂದಿಗೆ ಐಪಿಎಲ್ ಪಾಯಿಂಟ್‌ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಗಳಿಸಿದೆ.ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಉತ್ತಮ ಆರಂಭದಲ್ಲಿತ್ತು. ಆದರೆ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ಸಾಧಿಸಲು ಅಸಮರ್ಥವಾಯಿತು. ಐಪಿಎಲ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಶಿಖರ್ ಧವನ್ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ- 20 ಸರಣಿಯಿಂದ ಹೊರಗುಳಿದಿದ್ದಾರೆ. (@)