ಕೆಕೆಆರ್ ಗೆ ಸಂಕಷ್ಟ: ವೇಗಿ ಪ್ಯಾಟ್ ಕಮಿನ್ಸ್ ಐಪಿಎಲ್ ನಿಂದ ಹೊರಕ್ಕೆ ಐಪಿಎಲ್ ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು. ಸಿಡ್ನಿ: ಕೊರೊನಾ ವೈರಸ್ ಹಾವಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹದಿನಾಲ್ಕನೇ ಆವೃತ್ತಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುನೈಟೆಡ್ ಅರಬ್ ಏಮಿರೇಟ್ಸ್ ನಲ್ಲಿ(ಯುಎಇ) ಮುಂದುವರಿಸಲಾಗುವುದೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ.ಇದರೊಂದಿಗೆ ಐಪಿಎಲ್ ನ 14 ನೇ ಆವೃತ್ತಿ ಪೂರ್ಣಗೊಳ್ಳುವುದೇ ಎಂಬ ಶಂಕೆ ಈಗ ದೂರವಾದಂತಾಗಿದೆ. ಆದರೆ ಆ ಸಮಯದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇತರ ರಾಷ್ಟ್ರಗಳ ಕೆಲ ಆಟಗಾರರು ಐಪಿಎಲ್ ನಲ್ಲಿ ಆಡಲು ಸಾಧ್ಯವಾಗದು ಎಂದು ಹೇಳಲಾಗುತ್ತಿದೆ.ಐಪಿಎಲ್ ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು.ತಮ್ಮ ತಂಡದ ಆಟಗಾರರರು ಹೆಚ್ಚಿನ ಸಮಯವನ್ನು ಲೀಗ್ ಹಾಗೂ ಬಯೋ ಬಬಲ್ ನಲ್ಲಿ ಕಳೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಬಯಸಿದೆ. ಹೀಗಾಗಿ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.