ಮತ್ತೆ ಒಂದಾದ ಟಿಮೊನ್, ಪುಂಬಾ: ಕ್ರಿಸ್ ಗೇಲ್ ಜೊತೆಗಿನ ಅದ್ಭುತ ಕ್ಷಣವನ್ನು ನೆನಪಿಸಿಕೊಂಡ ಚಾಹಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರೊಂದಿಗಿನ ಅದ್ಭುತವಾದ ಕ್ಷಣವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ನೆನಪಿಸಿಕೊಂಡಿದ್ದಾರೆ. ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರೊಂದಿಗಿನ ಅದ್ಭುತವಾದ ಕ್ಷಣವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ನೆನಪಿಸಿಕೊಂಡಿದ್ದಾರೆ.ಟಿಮನ್, ಪುಂಬಾ ಮತ್ತೆ ಒಂದಾಗುತ್ತಿದ್ದಾರೆ ಎಂಬ ಅಡಿಬರಹ ನೀಡಿ, ಹಿಂದೆ ಆರ್ ಸಿಬಿ ತಂಡದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರನ್ನು ತಬ್ಬಿಕೊಂಡು ಸಂತಸಪಟ್ಟಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. & # ../eh2xsfz7tfಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಕ್ರಿಸ್ ಗೇಲ್, ಗುರುವಾರ ನಡೆದ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದರು. 45 ಎಸೆತಗಳಲ್ಲಿ 53 ರನ್ ಗಳಿಸುವ ಮೂಲಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ನೀಡಿದ್ದ 172 ರನ್ ಗಳ ಗುರಿ ಮುಟ್ಟಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವು ಸಾಧಿಸಲು ಕ್ರಿಸ್ ಗೇಲ್ ನೆರವು ನೀಡಿದ್ದರು.