ಡೆಲ್ಲಿ ತಂಡಕ್ಕೆ 180 ರನ್ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅ.17 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಎದುರಾಳಿ ತಂಡಕ್ಕೆ 180 ರನ್ ಗಳ ಟಾರ್ಗೆಟ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅ.17 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಎದುರಾಳಿ ತಂಡಕ್ಕೆ 180 ರನ್ ಗಳ ಟಾರ್ಗೆಟ್ ನೀಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಂಎಸ್ ಧೋನಿ ನೇತೃತ್ವದ ತಂಡ, 4 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 179 ರನ್ ಗಳಿಸಿತು. ಆರಂಭಿಕ ಆಘಾತ ಎದುರಿಸಿದ ಚೆನ್ನೈ ತಂಡ ಕ್ರಮೇಣ ವಿಕೆಟ್ ಕಾಯ್ದುಕೊಂಡು ಫಾಫ್‌ ಡು'ಪ್ಲೆಸಿಸ್‌ 58 (47) ಎಸ್ ಆರ್ ವಾಟ್ಸನ್ 36 (28) ಆಂಬಟಿ ರಾಯುಡು 45(25) ರವೀಂದ್ರ ಜಡೇಜ 33 (13) ರನ್ ಗಳ ನೆರವಿನಿಂದ 179 ರನ್ ಗಳಿಸಿತು. ಫಾಫ್‌ ಡು'ಪ್ಲೆಸಿಸ್‌ ಹಾಗೂ ಶೇನ್ ವಾಟ್ಸನ್ ತಂಡಕ್ಕೆ 87 ರನ್ ಗಳ ಜೊತೆಯಾಟ ನೀಡಿದರು.