2024, 1: ಸ್ಲೋ ಪಿಚ್ ನಲ್ಲಿ ಮಂಕಾದ ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ! ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ. ಅಹ್ಮದಾಬಾದ್: ರಾಜಸ್ತಾನ ತಂಡದ ಬೌಲರ್ ಗಳ ಶಿಸ್ತುಬದ್ದ ದಾಳಿ ಎಂದು ಮಂಕಾದ ಆರ್ ಸಿಬಿ ಬ್ಯಾಟರ್ ಗಳು RRಗೆ ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ನೀಡಿದ್ದಾರೆ.ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಕಲೆಹಾಕಿತು.ಆರ್ ಸಿಬಿ ಪರ ವಿರಾಟ್ ಕೊಹ್ಲಿ 33ರನ್, ನಾಯಕ ಫಾಫ್ ಡುಪ್ಲೆಸಿಸ್ 17ರನ್, ಕ್ಯಾಮೆರಾನ್ ಗ್ರೀನ್ 27 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ (34) ಕೊಂಚ ಪ್ರತಿರೋಧ ತೋರಿದರೂ ಬಳಿಕ ಬಂದ ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಔಟಾಗಿದ್ದು ತಂಡಕ್ಕೆ ದುಬಾರಿಯಾಯಿತು.ಮಹಿಪಾಲ್ ಲಾಮ್ರೋರ್ 32 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 11 ರನ್ ಗಳಿಸಿದರು. ಅಂತಿಮವಾಗಿ ಆರ್ ಸಿಬಿ ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಕಲೆಹಾಕಿ, ರಾಜಸ್ತಾನಕ್ಕೆ ಗೆಲ್ಲಲು 173 ರನ್ ಗುರಿ ನೀಡಿತು.ರಾಜಸ್ತಾನ ಶಿಸ್ತುಬದ್ಧ ಬೌಲಿಂಗ್ ದಾಳಿಇನ್ನು ಆರ್ ಸಿಬಿ ವಿರುದ್ಧ ಶಿಸ್ತುಬದ್ಧ ಬೌಲಿಂಗ್ ದಾಳಿ ಪ್ರದರ್ಶಿಸಿದ ರಾಜಸ್ತಾನ ಪರ ಆವೇಶ್ ಖಾನ್ 3 ವಿಕೆಟ್ ಪಡೆದರೆ, ಆರ್ ಅಶ್ವಿನ್ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಮತ್ತು ಚಹಲ್ ತಲಾ ಒಂದು ವಿಕೆಟ್ ಪಡೆದರು.