ಐಪಿಎಲ್ 2023: ವಿರಾಟ್ ಕೊಹ್ಲಿ ಹೋರಾಟ ವ್ಯರ್ಥ; ಕೋಲ್ಕತಾ ವಿರುದ್ಧ ಆರ್ ಸಿಬಿಗೆ ಸೋಲು ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಶಾದಾಯಕ ಸೋಲು ಕಂಡಿದೆ. ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಶಾದಾಯಕ ಸೋಲು ಕಂಡಿದೆ.ಕೋಲ್ಕತಾ ನೀಡಿದ 201ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 21 ರನ್ ಗಳ ಅಂತರದಲ್ಲಿ ನಿರಾಶಾದಾಯಕ ಸೋಲು ಕಂಡಿತು.ಇದನ್ನೂ ಓದಿ: ಐಪಿಎಲ್ 2023: ಆರ್ ಸಿಬಿಗೆ ಗೆಲ್ಲಲು 201 ರನ್ ಗಳ ಬೃಹತ್ ಗುರಿ ನೀಡಿದ ಕೋಲ್ಕತಾ ನೈಟ್ ರೈಡರ್ಸ್!ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ಆರ್ ಸಿಬಿ ಸೋಲಿಗೆ ಕಾರಣವಾಯಿತು. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 54 ರನ್ ಸಿಡಿಸಿದರೆ, ದಿನೇಶ್ ಕಾರ್ತಿಕ್ 22 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಮಹಿಪಾಲ್ ಲಾಮ್ರೋರ್ 34 ರನ್ ಗಳಿಸಿದರು.ಕೋಲ್ಕತಾ ಪರ ವರಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಮತ್ತು ರಸೆಲ್ ತಲಾ 2 ವಿಕೆಟ್ ಪಡೆದರು.