3ನೇ ದಿನದಾಟ ಅಂತ್ಯ: ಒಲಿ ಪೋಪ್ ಶತಕ; ಇಂಗ್ಲೆಂಡ್ 316/6, ಆಂಗ್ಲರಿಗೆ 126 ರನ್ ಮುನ್ನಡೆ! ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯಗೊಂಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಒಲಿ ಪೋಪ್ ಶತಕದ ನೆರವಿನಿಂದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದು 126 ರನ್ ಗಳ ಮುನ್ನಡೆ ಸಾಧಿಸಿದೆ. ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯಗೊಂಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಒಲಿ ಪೋಪ್ ಶತಕದ ನೆರವಿನಿಂದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದು 126 ರನ್ ಗಳ ಮುನ್ನಡೆ ಸಾಧಿಸಿದೆ.ಇಂಗ್ಲೆಂಡ್ ಪರ ಒಲಿ ಪೋಪ್ 148 ರನ್ ಹಾಗೂ ರೆಹಾನ್ ಅಹ್ಮದ್ 16 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಈ ಮೂಲಕ ಪ್ರವಾಸಿ ತಂಡ ಇದೀಗ ಭಾರತಕ್ಕಿಂತ 126 ರನ್‌ಗಳ ಮುನ್ನಡೆ ಸಾಧಿಸಿದೆ. ಇದೀಗ ನಾಲ್ಕನೇ ದಿನದ ಆಟದಲ್ಲಿ ಒಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಆದಷ್ಟು ಬೇಗ ಇಂಗ್ಲೆಂಡ್ ಇನ್ನಿಂಗ್ಸ್ ಅಂತ್ಯಗೊಳಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದೆ. ಏಕೆಂದರೆ ಈ ಜೋಡಿ ಕ್ರೀಸ್‌ನಲ್ಲಿ ಉಳಿದರೆ ಟೀಂ ಇಂಡಿಯಾ ಪಂದ್ಯ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಬೇಕಾಗುತ್ತದೆ.ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯ: ವಿವಾದಾತ್ಮಕ ತೀರ್ಪಿಗೆ ಔಟಾದ ರವೀಂದ್ರ ಜಡೇಜಾ, ಅಂಪೈರ್ ವಿರುದ್ಧ ನೆಟ್ಟಿಗರು ಗರಂಎರಡನೇ ಇನ್ನಿಂಗ್ಸ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಭಾರತ ಕಟ್ಟಿಹಾಕಿತು. ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ 47 ರನ್ ಕೊಡುಗೆ ನೀಡಿದರು. ಜಾಕ್ ಕ್ರೌಲಿ ಅವರೊಂದಿಗೆ 45 ರನ್‌ಗಳ ಪಾಲುದಾರಿಕೆಯನ್ನು ಮಾಡಿದರು. ಆದಾಗ್ಯೂ, ಇದರ ನಂತರ ಜೋ ರೂಟ್, ಜಾನಿ ಬೈರ್‌ಸ್ಟೋ ಮತ್ತು ನಾಯಕ ಬೆನ್ ಸ್ಟೋಕ್ಸ್ ಅಗ್ಗವಾಗಿ ಪೆವಿಲಿಯನ್‌ಗೆ ಮರಳಿದರು. ಸತತವಾಗಿ ಬೀಳುತ್ತಿರುವ ವಿಕೆಟ್‌ಗಳ ನಡುವೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಓಲಿ ಪೋಪ್ ಜವಾಬ್ದಾರಿ ವಹಿಸಿಕೊಂಡರು.ಬಲಿಷ್ಠ ಬ್ಯಾಟಿಂಗ್ ಜೊತೆಗಾರ ಬೆನ್ ಫಾಕ್ಸ್ ಜತೆಗೂಡಿ ಒಲಿ ಪೋಪ್ 100ಕ್ಕೂ ಹೆಚ್ಚು ರನ್ ಜೊತೆಯಾಟ ನಡೆಸಿದರು. ಈ ವೇಳೆ ಪೋಪ್ ಕೂಡ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಒಲಿ ಪೋಪ್ ಅವರ 5ನೇ ಶತಕವಾಗಿದೆ.ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 431 ರನ್ ಗಳಿಸಿತ್ತು.