2023: ಭಾರತದ ವಿರುದ್ಧ ಸೋಲು; ಶ್ರೀಲಂಕಾ ಹೆಸರಲ್ಲಿ ಮೂರು ಹೀನಾಯ ದಾಖಲೆ! ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದ ಹೀನಾಯ ಸೋಲಿನ ಮೂಲಕ ಶ್ರೀಲಂಕಾ ತಂಡ 3 ಅನಗತ್ಯ ದಾಖಲೆಗಳಿಗೆ ಪಾತ್ರವಾಗಿದೆ. ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ( 2023)ಯ ನಿನ್ನೆಯ ಪಂದ್ಯದ ಹೀನಾಯ ಸೋಲಿನ ಮೂಲಕ ಶ್ರೀಲಂಕಾ ತಂಡ 3 ಅನಗತ್ಯ ದಾಖಲೆಗಳಿಗೆ ಪಾತ್ರವಾಗಿದೆ.ಹೌದು.. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 358 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ ತಂಡ ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ ()ದ ವಿರುದ್ಧ 302ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಮೂಲಕ ಸಿಂಹಳೀಯರು ಜಾಗತಿಕ ಕ್ರಿಕೆಟ್ ನಲ್ಲಿ ಮೂರು ಅನಗತ್ಯ ಹೀನಾಯ ದಾಖಲೆಗಳಿಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: 2023: ಭಾರತ ಶ್ರೀಲಂಕಾ, ಟೀಂ ಇಂಡಿಯಾಗೆ ಜಾಗತಿಕ 4ನೇ ದಾಖಲೆಯ ಜಯಶ್ರೀಲಂಕಾದ 3ನೇ ಅತ್ಯಲ್ಪ ಮೊತ್ತ ಇನ್ನು ನಿನ್ನೆ ಶ್ರೀಲಂಕಾ ತಂಡ () ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಶ್ರೀಲಂಕಾ ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ 3ನೇ ಅತ್ಯಲ್ಪ ಮೊತ್ತವಾಗಿದೆ. ಈ ಹಿಂದೆ 2012ರಲ್ಲಿ ಪಾರ್ಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 43ರನ್ ಗಳಿದೆ ಸರ್ವ ಪತನ ಕಂಡಿತ್ತು. ಇದು ಶ್ರೀಲಂಕಾ ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ಮೊತ್ತವಾಗಿದೆ. ಬಳಿಕ ಇದೇ ವರ್ಷ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಲಂಕನ್ನರು 50ರನ್ ಗಳಿಗೆ ಆಲೌಟ್ ಆಗಿದ್ದರು. ಇದು ಶ್ರೀಲಂಕಾ ತಂಡದ 2ನೇ ಕಳಪೆ ಮೊತ್ತವಾಗಿ ದಾಖಲಾಗಿದೆ. ನಿನ್ನೆಯ ಪಂದ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 43 , , 2012 50 , , 2023 55 , , * 55 , 1986 67 , 2014 73 , 2023ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಜಹೀರ್ ಖಾನ್, ಶ್ರೀನಾಥ್ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ!ಭಾರತದ ವಿರುದ್ಧ 2ನೇ ಕಳಪೆ ಮೊತ್ತ ಇನ್ನು ನಿನ್ನೆ ಲಂಕಾ ಗಳಿಸಿದ 55 ರನ್ ಗಳ ಮೊತ್ತ ಭಾರತದ ವಿರುದ್ಧ ದಾಖಲಾದ 2ನೇ ಕಳಪೆ ಮೊತ್ತವಾಗಿದೆ. ಇದೇ ವರ್ಷ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಲಂಕನ್ನರು 50ರನ್ ಗಳಿಗೆ ಆಲೌಟ್ ಆಗಿದ್ದರು. ಇದು ಶ್ರೀಲಂಕಾ ತಂಡದ 2ನೇ ಕಳಪೆ ಮೊತ್ತವಾಗಿ ದಾಖಲಾಗಿದೆ. ನಿನ್ನೆಯ ಪಂದ್ಯ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. 2014ರಲ್ಲಿ ಮೀರ್ ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ()ಭಾರತದ ವಿರುದ್ಧ 58ರನ್ ಗಳಿಗೆ ಆಲೌಟ್ ಆಗಿತ್ತು. ಇದು ಮೂರನೇ ಸ್ಥಾನದಲ್ಲಿದೆ. 50 , 2023 * 55 , , * 58 , 2014 65 , 2005 73 , 2023ಇದನ್ನೂ ಓದಿ: ಲಂಕಾ ವಿರುದ್ಧ 302 ರನ್ ಗಳ ಜಯ: ವಿಶ್ವಕಪ್-2023 ಸೆಮಿಫೈನಲ್ಸ್ ಪ್ರವೇಶಿಸಿದ ಭಾರತವಿಶ್ವಕಪ್ ನಲ್ಲಿ ತಂಡವೊಂದರ ಅತ್ಯಂತ ಕಳಪೆ ಮೊತ್ತ ಇನ್ನು ಲಂಕಾ ಗಳಿಸಿದ 55ರನ್ ಗಳ ಮೊತ್ತ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಮೊದಲ ಕಳಪೆ ಮೊತ್ತವಾಗಿದೆ. ಈ ಹಿಂದೆ 2011ರಲ್ಲಿ ಮೀರ್ ಪುರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ( ) ವಿರುದ್ಧ ಬಾಂಗ್ಲಾದೇಶ 58ರನ್ ಗಳಿಗೆ ಆಲೌಟ್ ಆಗಿತ್ತು. ಇದು ಈ ವರೆಗೂ ವಿಶ್ವಕಪ್ ನಲ್ಲಿ ತಂಡವೊಂದರ ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಇದೀಗ ಈ ದಾಖಲೆಯನ್ನು ಲಂಕಾ ತನ್ನ ಹೆಸರಿಗೆ ಬರೆದುಕೊಂಡಿದೆ. - 55 - , , * 58 - , , 2011 74 - , , 1992