2ನೇ ಟೆಸ್ಟ್: ಉಮೇಶ್, ಅಶ್ವಿನ್ ಮಾರಕ ಬೌಲಿಂಗ್ ದಾಳಿ; 227 ರನ್ ಗಳಿಗೆ ಬಾಂಗ್ಲಾ ಪತನ! ಪ್ರವಾಸಿ ಭಾರತ ತಂಡ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳಿಗೆ ಸರ್ವಪತನ ಕಂಡಿದೆ. ಮೀರ್ಪುರ್: ಪ್ರವಾಸಿ ಭಾರತ ತಂಡ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳಿಗೆ ಸರ್ವಪತನ ಕಂಡಿದೆ.ಮೀರ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ಬೌಲರ್ ಗಳು ಮಾರಕರಾದರು. ನಜ್ಮುಲ್ ಶಾಂಟೋರನ್ನು ಅಶ್ವಿನ್ 24 ರನ್ ಗಳಿಗೆ ಎಲ್ ಬಿಡಬ್ಲ್ಯೂ ಮಾಡಿದರು. ನಂತರ 15 ರನ್ ಗಳಿಸಿದ್ದ ಝಾಕೀರ್ ಹಸನ್ ರನ್ನು ಉನಾದ್ಕತ್ ಔಟ್ ಮಾಡಿದರು. ಈ ವೇಳೆ ಬಾಂಗ್ಲಾಗೆ ಆಸರೆಯಾಗಿದ್ದು ಮೊಮಿನೂಲ್ ಹಕ್ ಅಜೇಯ 84 ರನ್ ಪೇರಿಸಿದ್ದು ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ಇನ್ನು ನಾಯಕ ಶಕೀಬ್ ಹಲ್ ಹಸನ್ 16, ಮುಷ್ಫಿಕರ್ ರಹೀಮ್ 26, ಲಿಟನ್ ದಾಸ್ 25, ಮೆಹದಿ ಹಸನ್ 15 ಹಾಗೂ ನೂರುಲ್ ಹಸನ್ 6 ರನ್ ಗಳಿಸಿ ಔಟಾಗಿದ್ದಾರೆ. ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕ ಪಟ್ಟಿ: ಬಲಿಷ್ಠ ತಂಡಗಳನ್ನು ಹಿಂದಿಕ್ಕಿದ ಟೀಂ ಇಂಡಿಯಾಇನ್ನು ಭಾರತದ ಪರ ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಪಡೆದಿದ್ದರೆ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದಿದ್ದಾರೆ.