ಐಪಿಎಲ್‌ಗೆ ಕವಿದ ಕಾರ್ಮೋಡ: ಸಿಎಸ್‌ಕೆ ಬೌಲರ್, 12 ಸಿಬ್ಬಂದಿಗೆ ವಕ್ಕರಿಸಿದ ಕೊರೋನಾ! ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಐಪಿಎಲ್ ನಡೆಯಲಿದ್ದು ಅದಾಗಲೇ ಕೆಲ ತಂಡಗಳು ಅಬುಧಾಬಿಯನ್ನು ಸೇರಿಕೊಂಡಿದೆ. ಅಬುಧಾಬಿ: ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಐಪಿಎಲ್ ನಡೆಯಲಿದ್ದು ಅದಾಗಲೇ ಕೆಲ ತಂಡಗಳು ಅಬುಧಾಬಿಯನ್ನು ಸೇರಿಕೊಂಡಿದೆ.ಇನ್ನು ಆಗಸ್ಟ್ 12ರಂದೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇ ತಲುಪಿತ್ತು. ಇದೀಗ ತಂಡದ ವೇಗಿ ಮತ್ತು ತಂಡದ 12 ಸಹಾಯಕ ಸಿಬ್ಬಂದಿಗೆ ಕೊರೋನಾ ಮಹಾಮಾರಿ ವಕ್ಕರಿಸಿದೆ. ಯುಎಇ ತಲುಪುವ ಮುನ್ನ ಈ ಆಟಗಾರರಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು ಆಗ ನೆಗೆಟಿವ್ ಬಂದಿತ್ತು. ಯುಎಇ ತಲುಪಿದ ನಂತರ ಈ ಆಟಗಾರರನ್ನು ಆರು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಟೆಸ್ಟ್ ಮಾಡಿದ್ದು ಅದರಲ್ಲಿ ಚೆನ್ನೈ ತಂಡದ ಕೆಲ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದ್ದು ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಲಿದೆ.