ಐಪಿಎಲ್ 2023: ಸತತ ಎರಡನೇ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ 5 ವಿಕೆಟ್ ಭರ್ಜರಿ ಜಯ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸೋಲಿನ ಸುಳಿಯಿಂದ ಹೊರಬಂದಿದೆ. ಇದೇ ವೇಳೆ ಕೋಲ್ಕತ್ತಾ ಮೂರನೇ ಸೋಲನ್ನು ಅನುಭವಿಸಿದೆ. ಮುಂಬೈ: ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸೋಲಿನ ಸುಳಿಯಿಂದ ಹೊರಬಂದಿದೆ. ಇದೇ ವೇಳೆ ಕೋಲ್ಕತ್ತಾ ಮೂರನೇ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 185 ರನ್ ಪೇರಿಸಿತ್ತು. ಇನ್ನು ಮುಂಬೈ 14 ಎಸೆತಗಳು ಬಾಕಿ ಇರುವಂತೆಯೇ 186 ರನ್ ಪೇರಿಸಿ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿತು.ಇದನ್ನೂ ಓದಿ: ಕೊನೆಗೂ ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್‌ ಪದಾರ್ಪಣೆ; ತಂದೆ ಸಚಿನ್ ಜೊತೆ ಹೊಸ ದಾಖಲೆಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ (104 ರನ್) ಗಳಿಸಿದರು. ಅದೇ ವೇಳೆ ಮುಂಬೈ ಪರ ಹೃತಿಕ್ ಶೋಕೀನ್ ಎರಡು ವಿಕೆಟ್ ಪಡೆದರು. ಇದರ ನಂತರ ಇಶಾನ್ ಕಿಶನ್ 58 ಮತ್ತು ಸೂರ್ಯಕುಮಾರ್ 43 ರನ್ ಗಳಿಸಿದ್ದು ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.ಈ ಟೂರ್ನಿಯಲ್ಲಿ ಮುಂಬೈಗೆ ಇದು ಸತತ ಎರಡನೇ ಗೆಲುವಾಗಿದೆ. ಅದೇ ಸಮಯದಲ್ಲಿ ಕೋಲ್ಕತ್ತಾ ತನ್ನ ಮೂರನೇ ಸೋಲು ಕಂಡಿದೆ.