T20 : ಸೂರ್ಯ ಕುಮಾರ್ ಯಾದವ್ ಅಗ್ರ ಸ್ಥಾನ ಅಬಾಧಿತ, ಭರ್ಜರಿ ಬಡ್ತಿ ಪಡೆದ ಹಾರ್ದಿಕ್ ಪಾಂಡ್ಯ! ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಐಸಿಸಿ ಟಿ20 ರ್ಯಾಂಕಿಂಗ್ ಪರಿಷ್ಕರಣೆ ಮಾಡಿದ್ದು, ಬ್ಯಾಟರ್ ಗಳ ಪಟ್ಟಿಯಲ್ಲಿ ಈ ಹಿಂದೆ ಅಗ್ರ ಸ್ಥಾನಕ್ಕೇರಿದ್ದ ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದು, ಭರ್ಜರಿ ಪ್ರದರ್ಶನ ತೋರಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಬಡ್ತಿ ಪಡೆದಿದ್ದಾರೆ. ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಐಸಿಸಿ ಟಿ20 ರ್ಯಾಂಕಿಂಗ್ ಪರಿಷ್ಕರಣೆ ಮಾಡಿದ್ದು, ಬ್ಯಾಟರ್ ಗಳ ಪಟ್ಟಿಯಲ್ಲಿ ಈ ಹಿಂದೆ ಅಗ್ರ ಸ್ಥಾನಕ್ಕೇರಿದ್ದ ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದು, ಭರ್ಜರಿ ಪ್ರದರ್ಶನ ತೋರಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಬಡ್ತಿ ಪಡೆದಿದ್ದಾರೆ.ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ (T20 2022) ಅದ್ಭುತ ಪ್ರದರ್ಶನ ನೀಡಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಐಸಿಸಿ T20I ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ ( T20 ) ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಾತ್ರವಲ್ಲದೇ ನಂಬರ್ ಒನ್ ರೇಸ್ನಲ್ಲಿ ಸೂರ್ಯ ಕುಮಾರ್ ಯಾದವ್ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದು, ಸದ್ಯದ ಮಟ್ಟಿಗೆ ಅವರ ಅಗ್ರ ಸ್ಥಾನ ಅಬಾಧಿತವಾಗಿದೆ. ಇದನ್ನೂ ಓದಿ: ಬಹು ದೊಡ್ಡ ನಿರ್ಧಾರಕ್ಕೆ ಮುಂದಾದ ಬಿಸಿಸಿಐ: ಭಾರತ ತಂಡ ಸೇರುತ್ತಾರಾ ಮಹೇಂದ್ರ ಸಿಂಗ್ ಧೋನಿ?ಸೂರ್ಯಕುಮಾರ್ ಯಾದವ್ ( ) ಟಿ20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ಕ್ರಿಕೆಟ್ನ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಇಡೀ ಟೂರ್ನಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಭರ್ಜರಿ 3 ಅರ್ಧಶತಕಗಳನ್ನು ಬಾರಿಸಿದ್ದರು. ಟಿ20 ವಿಶ್ವಕಪ್‌ನ ಸೂಪರ್ 12 ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯ, ಟಿ20 ಕ್ರಿಕೆಟ್ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 869 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೇವಲ 14 ರನ್‌ಗಳಿಗೆ ಔಟಾದ ಕಾರಣ, 869 ಅಂಗಳಲ್ಲಿ 10 ಅಂಕ ಕಡಿತಗೊಂಡಿದೆ. ಆದಾಗ್ಯೂ, ಈ ಕುಸಿತದ ನಂತರವೂ ಸೂರ್ಯ ನಂಬರ್ 859 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟು 239 ರನ್ ಗಳಿಸಿದರು. ಇದರೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದನ್ನೂ ಓದಿ: ಐಪಿಎಲ್ ನಿಂದ ಪೊಲಾರ್ಡ್ ನಿವೃತ್ತಿ: ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಕೆಉಳಿದಂತೆ 836 ಅಂಕಗಳೊಂದಿಗೆ ಪಾಕಿಸ್ತಾನದ ಮಹಮದ್ ರಿಜ್ವಾನ್ 2ನೇ ಸ್ಥಾನದಲ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 778 ಅಂಕಗಳೊಂದಿಗೆ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 663 ಅಂಕಗಳೊಂದಿಗೆ 11 ಸ್ಥಾನದಲ್ಲಿದ್ದು, 594 ಅಂಕಗಳೊಂದಿಗೆ ಭಾರತದ ಕೆಎಲ್ ರಾಹುಲ್ 17 ಮತ್ತು 591 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ. ಭಡ್ತಿ ಪಡೆದ ಹಾರ್ದಿಕ್ ಪಾಂಡ್ಯ ಇನ್ನು ಟೂರ್ನಿಯ ಅಂತ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ 473 ಅಂಕಗಳೊಂದಿಗೆ 56ನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಕೂಡ ಟಿ20 ಶ್ರೇಯಾಂಕದಲ್ಲಿ 22 ಸ್ಥಾನ ಮೇಲೇರಿ 12 ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ರಿಲೆ ರುಸ್ಸೋ ನಂ.7ಕ್ಕೆ ಏರಿದರೆ, ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಒಂದು ಸ್ಥಾನ ಕುಸಿದು ನಂ.8ಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನವನ್ನುಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ವೇಳೆ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಎಂದಿನಂತೆ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದಲ್ಲದೇ ಡೆವೊನ್ ಕಾನ್ವೇ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.ಬೌಲರ್‌ಗಳಲ್ಲಿ ಹಸರಂಗಗೆ ಅಗ್ರಸ್ಥಾನ ಬೌಲರ್‌ಗಳ ಪೈಕಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್‌ನ ಆದಿಲ್ ರಶೀದ್ ಐದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಹಾಗೆಯೇ ಟೂರ್ನಿಯ ಆಟಗಾರ ಹಾಗೂ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸ್ಯಾಮ್ ಕರನ್ ಕೂಡ 2 ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ.ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ ಹಾರ್ದಿಕ್ ನನ್ನು ನಾಯಕನನ್ನಾಗಿ ಮಾಡಿ, ಹೊಸ ತಂಡ ಕಟ್ಟಲು ಪ್ರಾರಂಭಿಸಿ: ಶ್ರೀಕಾಂತ್ಬೌಲರ್‌ಗಳ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಶ್ರೀಲಂಕಾದ ವನಿಂದು ಹಸರಂಗ ಅಗ್ರಸ್ಥಾನದಲ್ಲಿ ಮುಂದುವರಿದರೆ, ಅಫ್ಘಾನಿಸ್ತಾನದ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ ವಿಭಾಗದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ.