ಎಂಎಸ್ ಧೋನಿ ಬಳಿಕ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ನಾಯಕ ವಿರಾಟ್ ಕೊಹ್ಲಿ! ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದ ಗೆಲುವಿನ ಮೂಲಕ ಟಿ20 ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವ ಅಂತ್ಯಗೊಂಡಿದೆ. ದುಬೈ: ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದ ಗೆಲುವಿನ ಮೂಲಕ ಟಿ20 ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವ ಅಂತ್ಯಗೊಂಡಿದೆ. ಟಿ20 ವಿಶ್ವಕಪ್ ನಲ್ಲಿ ಭಾರತ ಸೆಮಿ ಫೈನಲ್ಸ್ ತಲುವ ಕನಸು ಭಗ್ನಗೊಂಡಿದ್ದರೂ ವಿರಾಟ್ ಕೊಹ್ಲಿ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವ ಅಂತ್ಯಗೊಂಡಾಗ ಟಿ20 ಆವೃತ್ತಿಯಲ್ಲಿ ಭಾರತ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಭಾಜನರಾಗಿದ್ದರು. ಈಗ ಆ ಸಾಲಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ.ಇದನ್ನೂ ಓದಿ: ಟಿ-20 ವಿಶ್ವಕಪ್; ಕೊಹ್ಲಿ ಪ್ರೆಸ್ ಕಾನ್ಫರೆನ್ಸ್; ಪಾಕ್ ಪತ್ರಕರ್ತನ ಬೆವರಿಳಿಸಿದ ವಿರಾಟ್ ಮಹೇಂದ್ರ ಸಿಂಗ್ ಧೋನಿ ಅವರ ಬಳಿಕ ಟಿ20 ಆವೃತ್ತಿಯಲ್ಲಿ ಅತಿ ಯಶಸ್ವಿಯಾದ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.ನಾಯಕತ್ವ ವಹಿಸಿದ್ದ 50 ಪಂದ್ಯಗಳ ಪೈಕಿ 30 ಪಂದ್ಯಗಳಲ್ಲಿ ಭಾರತ ತಂಡ ಗೆದ್ದಿದ್ದು 16 ರಲ್ಲಿ ಸೋತಿದೆ.ಇದನ್ನೂ ಓದಿ: ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ- ರವಿ ಶಾಸ್ತ್ರಿ ಜೋಡಿಯ ಯುಗಾಂತ್ಯ!ಇನ್ನು ತಂಡದ ನಾಯಕನಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ವಿಭಾಗದಲ್ಲಿ ಕೊಹ್ಲಿ ಆಸ್ಟ್ರೇಲಿಯಾದ ಆರಾನ್ ಫಿಂಚ್ ಅವರ ನಂತರದ ಸ್ಥಾನದಲ್ಲಿದ್ದಾರೆ. 47 ಇನ್ನಿಂಗ್ಸ್ ನಲ್ಲಿ 13 ಅರ್ಧಶತಕ ದಾಖಲಿಸಿ, 1570 ರನ್ ಗಳನ್ನು ಕೊಹ್ಲಿ ಗಳಿಸಿದ್ದಾರೆ.ಆದರೆ ಇಷ್ಟೆಲ್ಲ ಯಶಸ್ಸಿನ ನಡುವೆಯೂ ಕೊಹ್ಲಿಯನ್ನು ಒಂದು ಸಂಗತಿ ಮಾತ್ರ ಬಾಧಿಸುತ್ತಿದೆ. ಅದೇನೆಂದರೆ, ತಮ್ಮ ನಾಯಕತ್ವದಲ್ಲಿ ಭಾರತ ಐಸಿಸಿ ಟೈಟಲ್ ಗಳನ್ನು ಗೆದ್ದಿರುವುದು ಕಡಿಮೆ ಎಂಬ ಸಂಗತಿಯಾಗಿದೆ.ಟಿ20 ವಿಶ್ವಕಪ್: ಕೊಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ ನಮೀಬಿಯಾ ವಿರುದ್ಧ 9 ವಿಕೆಟ್ ಗಳ ಜಯಗಳಿಸಿದ ಭಾರತದೇಶಕ್ಕಿಂತ ಐಪಿಎಲ್ ಹೆಚ್ಚಾದಾಗ ಹೀಗಾಗುತ್ತದೆ: ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ಕುರಿತು ಕಪಿಲ್ ದೇವ್ ಹೇಳಿಕೆಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತಿದೊಡ್ಡ ಗೆಲುವು!