17ರ ಪೈಕಿ 16 ಪಂದ್ಯದಲ್ಲಿ 2ನೇ ಬ್ಯಾಟಿಂಗ್ ಮಾಡಿದ ತಂಡಕ್ಕೆ ಜಯ; ದುಬೈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದವನೇ ಬಾಸು! ಯುಎಇ ಮತ್ತು ಒಮನ್ ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಹಂತಕ್ಕೆ ಬಂದು ನಿಂತಿದ್ದು, ಇಲ್ಲಿಯವರೆಗೂ ನಡೆದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಟಾಸ್ ಅತ್ಯಂತ ನಿರ್ಣಾಯಕವಾಗಿತ್ತು. ದುಬೈ: ಯುಎಇ ಮತ್ತು ಒಮನ್ ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಹಂತಕ್ಕೆ ಬಂದು ನಿಂತಿದ್ದು, ಇಲ್ಲಿಯವರೆಗೂ ನಡೆದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಟಾಸ್ ಅತ್ಯಂತ ನಿರ್ಣಾಯಕವಾಗಿತ್ತು. ಇದನ್ನೂ ಓದಿ: ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಮರೆತ ಆಯ್ಕೆ ಸಮಿತಿ ವಿರುದ್ಧ ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಬಿಸಿಸಿಐ ಹೇಳಿದ್ದೇನು?ಅದರಲ್ಲೂ ಪ್ರಮುಖವಾಗಿ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದವನೇ ಬಾಸು ಎಂಬ ಮಾತು ಪದೇ ಪದೇ ನಿಜವಾಗಿದೆ. ನಿನ್ನೆ ನಡೆದ 2ನೇ ಸಮಿ ಪೈನಲ್ ಪಂದ್ಯದಲ್ಲೂ ಅದು ಸಾಬೀತಾಗಿದ್ದು, ಟಾಸ್ ಗೆದ್ದ ಆಸ್ಚ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಬಳಿಕ ಭರ್ಜರಿ ಚೇಸ್ ಮಾಡಿ ಜಯಿಸಿದೆ.ಇದನ್ನೂ ಓದಿ: ಟಿ20ವಿಶ್ವಕಪ್: ಪಾಕ್ ಗೆ ಮತ್ತೆ ನಾಕೌಟ್ ಹಾರ್ಟ್ ಬ್ರೇಕ್, 34 ವರ್ಷಗಳಿಂದ ಆಸಿಸ್ ಅಜೇಯ ದಾಖಲೆ ಮುಂದುವರಿಕೆಇದನ್ನೂ ಓದಿ: ವಿಶ್ವಕಪ್ ಟಿ20 ಸೆಮಿಫೈನಲ್: ಪಾಕ್ ವಿರುದ್ಧ 5 ವಿಕೆಟ್ ಜಯಗಳಿಸಿದ ಆಸಿಸ್ ಫೈನಲ್ಸ್ ಗೆಇದು ಮಾತ್ರವಲ್ಲ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಈ ವರಗೂ ಸತತ 17 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ 16 ಪಂದ್ಯಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ ಜಯಗಳಿಸಿದೆ. ಈ ಪಟ್ಟಿಯಲ್ಲಿ ಭಾರತ-ಪಾಕ್ ಪಂದ್ಯ ಕೂಡ ಸೇರಿದೆ. ಇದನ್ನೂ ಓದಿ: ಟಿ20 ವಿಶ್ವಕಪ್: ಆಗ ಹಸ್ಸಿ, ಈಗ ವೇಡ್; ಪಾಕ್ ಕೈಯಿಂದ ಗೆಲುವು ಕಸಿದ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು!ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದುಬೈ ಮೈದಾನದಲ್ಲಿ ಸೂಪರ್ 12 ಹಂತದಿಂದ ಈ ವರೆಗೂ ಒಟ್ಟು 12 ಪಂದ್ಯಗಳು ನಡೆದಿದ್ದು, ಈ 12 ಪಂದ್ಯಗಳಲ್ಲೂ 2ನೇ ಬಾರಿಗೆ ಬ್ಯಾಟಿಂಗ್ ಮಾಡಿರುವ ತಂಡಗಳ ಗೆದ್ದು ಬೀಗಿವೆ. ಇನ್ನೂ ಅಚ್ಚರಿ ಎಂದರೆ 12 ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡಗಳು ಗೆದ್ದಿದ್ದು, ಪಾಕ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಫ್ಗಾನಿಸ್ತಾನ ಸೋಲು ಕಂಡಿತ್ತು. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ಔಟ್, ಮೊದಲ ಪಂದ್ಯ ಕೊಹ್ಲಿಗೆ ವಿಶ್ರಾಂತಿಈ ಹಿಂದೆ ನಡೆದ ಐಪಿಎಲ್ ಪೈನಲ್ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ಅಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಚೆನ್ನೂ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 27 ರನ್ ಗಳಿಂದ ಮಣಿಸಿತ್ತು.ಇದನ್ನೂ ಓದಿ: ಟಿ20 ವಿಶ್ವಕಪ್: ಪಾಕ್ ಮಣಿಸಿ, ರನ್ ಚೇಸಿಂಗ್ ನಲ್ಲೂ ದಾಖಲೆ ಬರೆದ ಆಸಿಸ್ಅಂದಹಾಗೆ ಭಾನುವಾರ ಟೂರ್ನಿಯ ಫೈನಲ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಗಳು ಪರಸ್ಪರ ಪ್ರಶಸ್ತಿಗಾಗಿ ಕಾದಾಡಲಿವೆ. ಇಲ್ಲೂ ಕೂಡ ಟಾಸ್ ನಿರ್ಣಾಯಕ ಪಾತ್ರವಹಿಸುವ ಸಾದ್ಯತೆ ಇದೆ. ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಮರೆತ ಆಯ್ಕೆ ಸಮಿತಿ ವಿರುದ್ಧ ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಬಿಸಿಸಿಐ ಹೇಳಿದ್ದೇನು?ಟಿ20ವಿಶ್ವಕಪ್: ಪಾಕ್ ಗೆ ಮತ್ತೆ ನಾಕೌಟ್ ಹಾರ್ಟ್ ಬ್ರೇಕ್, 34 ವರ್ಷಗಳಿಂದ ಆಸಿಸ್ ಅಜೇಯ ದಾಖಲೆ ಮುಂದುವರಿಕೆಟಿ20 ವಿಶ್ವಕಪ್: ಆಗ ಹಸ್ಸಿ, ಈಗ ವೇಡ್; ಪಾಕ್ ಕೈಯಿಂದ ಗೆಲುವು ಕಸಿದ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು!ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ಔಟ್, ಮೊದಲ ಪಂದ್ಯ ಕೊಹ್ಲಿಗೆ ವಿಶ್ರಾಂತಿಟಿ20 ವಿಶ್ವಕಪ್: ಪಾಕ್ ಮಣಿಸಿ, ರನ್ ಚೇಸಿಂಗ್ ನಲ್ಲೂ ದಾಖಲೆ ಬರೆದ ಆಸಿಸ್ವಿಶ್ವಕಪ್ ಟಿ20 ಸೆಮಿಫೈನಲ್: ಪಾಕ್ ವಿರುದ್ಧ 5 ವಿಕೆಟ್ ಜಯಗಳಿಸಿದ ಆಸಿಸ್ ಫೈನಲ್ಸ್ ಗೆ