ಇತಿಹಾಸ ಸೃಷ್ಟಿಸಿದ ಅಜಿಂಕ್ಯ ರಹಾನೆ: ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ! ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, 'ಪಂದ್ಯ ಶ್ರೇಷ್ಠ ಪ್ರಶಸ್ತಿ' ರೂಪದಲ್ಲಿ ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಮೆಲ್ಬೋರ್ನ್: ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, 'ಪಂದ್ಯ ಶ್ರೇಷ್ಠ ಪ್ರಶಸ್ತಿ' ರೂಪದಲ್ಲಿ ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.ಜಾನಿ ಮುಲ್ಲಾಘ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 1868ರಲ್ಲಿ ಇಂಗ್ಲೆಂಡ್‌ಗೆ ಮೊಟ್ಟ ಮೊದಲ ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿತ್ತು. ಈ ನೆನಪಿನ ಗೌರವಾರ್ಥವಾಗಿ ಮಾಜಿ ನಾಯಕನ ಹೆಸರಿನಲ್ಲಿ ಈ ಪದಕ ನೀಡಲಾಗಿದೆ. ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಆಟಗಾರನಿಗೆ 'ಮುಲ್ಲಾಘ್‌ ಪದಕ' ನೀಡಲು ಈ ಹಿಂದೆ ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿಸಿತ್ತು.ಪ್ರತಿಷ್ಠಿತ 'ಮುಲ್ಲಾಘ್‌ ಪದಕ' ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಟೀಮ್‌ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಾತ್ರರಾಗಿದ್ದಾರೆ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ. - # @ajinkyarahane88 # ../0cBe2icMzzಇಲ್ಲಿನ ಇತಿಹಾಸ ಪ್ರಸಿದ್ಧ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌(ಎಂಸಿಜಿ)ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಭಾರತ, ಅಜಿಂಕ್ಯ ರಹಾನೆ(112) ಶತಕದ ಬಲದಿಂದ 326 ರನ್‌ ಗಳಿಸಿ, 131 ರನ್‌ ಮುನ್ನಡೆ ಗಳಿಸಿತ್ತು.ನಾಲ್ಕನೇ ದಿನವಾದ ಮಂಗಳವಾರ ಆಸ್ಟ್ರೇಲಿಯಾ ನೀಡಿದ್ದ 70 ರನ್‌ ಸಾಧಾರಣ ಗುರಿ ಬೆನ್ನತ್ತಿದ್ದ ಭಾರತ ತಂಡ, ಬಹುಬೇಗ ಮಯಾಂಕ್‌ ಅಗರ್ವಾಲ್‌ ಹಾಗೂ ಚೇತೇಶ್ವರ್‌ ಪೂಜಾರ ಅವರ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ, ಕ್ರೀಸ್‌ಗೆ ಬಂದ ಅಜಿಂಕ್ಯ ರಹಾನೆ 40 ಎಸೆತಗಳಲ್ಲಿ ಅಜೇಯ 27 ರನ್‌ ಕಲೆ ಹಾಕಿ ಭಾರತವನ್ನು ಗೆಲುವಿನ ದಡ ಸೇರಿಸಿದರು.ಇದಕ್ಕೂ ಮುನ್ನ 6 ವಿಕೆಟ್‌ ಕಳೆದುಕೊಂಡು 133 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ್ದ ಆಸ್ಟ್ರೇಲಿಯಾ ತಂಡ, 200 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ ಭಾರತಕ್ಕೆ 70 ರನ್‌ ಗುರಿ ನೀಡಿತ್ತು. 45 ರನ್‌ ಗಳಿಸಿದ ಕ್ಯಾಮೆರಾನ್‌ ಗ್ರೀನ್, ಆತಿಥೇಯರ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.