ಏಷ್ಯಾ ಕಪ್ 2023: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಪಾಕ್ ವಿರುದ್ಧ ಅತೀ ದೊಡ್ಡ ಗೆಲುವು ಏಷ್ಯಾ ಕಪ್ ಕ್ರಿಕೆಟ್ ನ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ ಕ್ರಿಕೆಟ್ ಇತಿಹಾಸದಲ್ಲೇ ಪಾಕ್ ಅತೀ ದೊಡ್ಡ ಗೆಲುವು ಸಾಧಿಸಿದೆ. ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ನ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ ಕ್ರಿಕೆಟ್ ಇತಿಹಾಸದಲ್ಲೇ ಪಾಕ್ ಅತೀ ದೊಡ್ಡ ಗೆಲುವು ಸಾಧಿಸಿದೆ.ಇಂದು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 228ರನ್ ಅಂತರದ ಗೆಲುವು ಸಾಧಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಪಾಕಿಸ್ತಾನ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2008ರಲ್ಲಿ ಮೀರ್ ಪುರದಲ್ಲಿ 140ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದು ಈ ವರೆಗೂ ಭಾರತ ಪಾಕಿಸ್ತಾನ ವಿರುದ್ಧ ಗಳಿಸಿದ್ದ ಅತೀ ದೊಡ್ಡ ಗೆಲುವು ಎಂದು ಪರಿಗಣಿಸಲಾಗಿತ್ತು. ಆದರೆ ಇಂದು ಆ ದಾಖಲೆಯನ್ನು ಭಾರತ ಅಳಿಸಿ ಹಾಕಿದೆ.ಇದನ್ನೂ ಓದಿ: ಏಷ್ಯಾಕಪ್ 2023: ಭಾರತದ ವಿರುದ್ಧ ಹೀನಾಯ ಸೋಲು, ಕಳಪೆ ದಾಖಲೆ ಬರೆದ ಪಾಕಿಸ್ತಾನBiggest 228 (), * 140 , 2008 124 , 2017ಏಕದಿನದಲ್ಲಿ ಭಾರತಕ್ಕೆ ಸಿಕ್ಕ 4ನೇ ಅತೀ ದೊಡ್ಡ ಗೆಲುವು ಅಂತೆಯೇ ಇಂದು ಭಾರತ ಗಳಿಸಿದ ಗೆಲುವು ರನ್ ಗಳ ಅಂತರದಲ್ಲಿ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕ 4ನೇ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಇದೇ ವರ್ಷ ಶ್ರೀಲಂಕಾ ವಿರುದ್ದ ತಿರುವನಂತಪುರದಲ್ಲಿ 317ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇದು ಏಕದಿನ ಕ್ರಿಕೆಟ್ ನಲ್ಲಿ ರನ್ ಗಳ ಅಂತರದಲ್ಲಿ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.ಇದನ್ನೂ ಓದಿ: ಏಷ್ಯಾಕಪ್ 2023: ಪಾಕಿಸ್ತಾನ ವಿರುದ್ಧ ಭಾರತಕ್ಕೆ 228 ರನ್ ಗಳ ಭರ್ಜರಿ ಜಯಇದಕ್ಕೂ ಮೊದಲು 2007ರಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ಬರ್ಮುಡಾ ವಿರುದ್ಧ ಭಾರತ 257ರನ್ ಗಳ ಅಂತರದ ಜಯ ಸಾಧಿಸಿತ್ತು. ಬಳಿಕ 2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 256ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇಂದು ಪಾಕಿಸ್ತಾನ ವಿರುದ್ಧ 228ರನ್ ಗಳ ಅಂತರ ಗೆಲುವು ಸಾಧಿಸಿದೆ. ( ) 317 , , 2023* 257 , , 2007 256 , , 2008 228 , (), 2023*