2023: ಆಫ್ಘಾನಿಸ್ತಾನದ ವಿರುದ್ಧ 241 ರನ್ ಗಳಿಗೆ ಶ್ರೀಲಂಕಾ ಆಲೌಟ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ತಂಡ 241 ರನ್ ಗಳಿಗೆ ಆಲೌಟ್ ಆಗಿದ್ದು, ಶಾಹಿದಿ ಪಡೆಗೆ ಗೆಲ್ಲಲು 242 ರನ್ ಗಳ ಸಾಧಾರಣ ಗುರಿ ನೀಡಿದೆ. ಪುಣೆ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿ ( 2023)ಯ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ()ದ ವಿರುದ್ಧ ಶ್ರೀಲಂಕಾ ( ) ತಂಡ 241 ರನ್ ಗಳಿಗೆ ಆಲೌಟ್ ಆಗಿದ್ದು, ಶಾಹಿದಿ ಪಡೆಗೆ ಗೆಲ್ಲಲು 242 ರನ್ ಗಳ ಸಾಧಾರಣ ಗುರಿ ನೀಡಿದೆ.ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ( ) ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ () ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ( ) ತಂಡ ಆಫ್ಘಾನಿಸ್ತಾನದ ಫಜಲ್ಹಕ್ ಫಾರೂಕಿ ಮತ್ತು ಮುಜೀಬ್ ಉರ್ ರೆಹಮಾನ್ ಬೌಲಿಂಗ್ ದಾಳಿ ಅಕ್ಷರಶಃ ನಲುಗಿ ಹೋಯಿತು.ಇದನ್ನೂ ಓದಿ: ಐಸಿಸಿ ವಿಶ್ವಕಪ್ 2023: ಲಂಕಾ ವಿರುದ್ಧದ ಪಂದ್ಯ, ಟಾಸ್ ಗೆದ್ದ ಅಪ್ಘಾನಿಸ್ತಾನ ಬೌಲಿಂಗ್ ಆಯ್ಕೆಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ತಂಡ 49.3 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.ಇದನ್ನೂ ಓದಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ, 7ನೇ ಸ್ಥಾನಕ್ಕಾಗಿ ಇಂಗ್ಲೆಂಡ್-ಆಫ್ಘಾನಿಸ್ತಾನ ನಡುವೆ ಪೈಪೋಟಿಶ್ರೀಲಂಕಾ ಪರ ಪಥುಂ ನಿಸ್ಸಾಂಕ 46 ರನ್ ಗಳಿಸಿದರೆ, ನಾಯಕ ಕುಶಾಲ್ ಮೆಂಡಿಸ್ 39ರನ್, ಸದೀರ ಸಮರವಿಕ್ರಮ 36ರನ್ ಮತ್ತು ಮಹೀಶ್ ತೀಕ್ಷಣ 29 ರನ್ ಗಳಿಸಿದರು. ಆಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ 4 ವಿಕೆಟ್ ಕಬಳಿಸಿದರೆ, ಮುಜೀಬ್ ಉರ್ ರೆಹಮಾನ್ 2, ಅಜ್ಮತುಲ್ಲಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಪಡೆದರು.