3ನೇ ಟಿ20: ಮತ್ತೆ ರಬಾಡಾಗೆ ರೋಹಿತ್ ಶರ್ಮಾ ವಿಕೆಟ್, ಜಂಟಿ ದಾಖಲೆ ಭಾರತದ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರಬಾಡಾಗೆ ವಿಕೆಟ್ ಒಪ್ಪಿಸುವ ಮೂಲಕ ಹೀನಾಯ ದಾಖಲೆಗೆ ಕಾರಣರಾಗಿದ್ದಾರೆ. ಇಂದೋರ್: ಭಾರತದ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರಬಾಡಾಗೆ ವಿಕೆಟ್ ಒಪ್ಪಿಸುವ ಮೂಲಕ ಹೀನಾಯ ದಾಖಲೆಗೆ ಕಾರಣರಾಗಿದ್ದಾರೆ.ಹೌದು.. ಇಂದು ಇಂದೋರ್ ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 228 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ನಿರಾಸೆ ಮೂಡಿಸಿದರೆ. ಇನ್ನಿಂಗ್ಸ್ ನ 2ನೇ ಎಸೆತದಲ್ಲೇ ರೋಹಿತ್ ಶರ್ಮಾ ರಬಾಡಾ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆಗಿ ಔಟಾದರು. ಈ ಮೂಲಕ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ರಬಾಡಾಗೆ 11ಬಾರಿ ವಿಕೆಟ್ ಒಪ್ಪಿಸಿದರು.ಇದನ್ನೂ ಓದಿ: 3ನೇ ಟಿ20: ದ.ಆಫ್ರಿಕಾ ಭರ್ಜರಿ ಬ್ಯಾಟಿಂಗ್, 2 ದಾಖಲೆ ನಿರ್ಮಾಣಆ ಮೂಲಕ ರಬಾಡಾ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾರನ್ನು ಅತೀಹೆಚ್ಚು ಬಾರಿ ಔಟ್ ಮಾಡಿದ ಜಂಟಿ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಕೂಡ ರೋಹಿತ್ ಶರ್ಮಾರನ್ನು 11 ಬಾರಿ ಔಟ್ ಮಾಡಿದ ಸಾಧನೆ ಮಾಡಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ ಶ್ರೀಲಂಕಾದ ಎಂಜೆಲೋ ಮ್ಯಾಥ್ಯೂಸ್ ಗೆ 10 ಬಾರಿ, ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಗೆ 8 ಬಾರಿ, ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್ ಬೌಲಿಂಗ್ ನಲ್ಲಿ 7 ಬಾರಿ ಔಟಾಗಿದ್ದಾರೆ. 11 / 10 8 7