ಕೈಗೆ ಗಾಯವಾದರೂ ಬಿಡದೇ ಬೌಲಿಂಗ್; ಮೊಹಮದ್ ಸಿರಾಜ್‌ಗೆ ಚಪ್ಪಾಳೆಯ ಗೌರವ! ವಿಡಿಯೋ ವೈರಲ್ ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದ ಈ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜೈಪುರ: ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದ ಈ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ನ್ಯೂಜಿಲೆಂಡ್ ಆರಂಭಿಕ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಸಿರಾಜ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸಿರಾಜ್ ಗೆ ಚೆಂಡು ಬಡಿದು ಎಡಗೈನಿಂದ ರಕ್ತ ಸೋರಲು ಪ್ರಾರಂಭಿಸಿತು.ಅಲ್ಲದೆ, ಮೈದಾನದಲ್ಲಿ ಮೊಹಮ್ಮದ್ ನೋವಿನಿಂದ ನರಳುತ್ತಿರುವುದು ಕಂಡುಬಂತು. ಕೂಡಲೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಈ ಘಟನೆಯ ನಡೆಯಿತು.ಇದನ್ನೂ ಓದಿ: ಪ್ರಥಮ ಟಿ-20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯನಂತರ ಸಿರಾಜ್ ಮತ್ತೆ ಬೌಲಿಂಗ್ ಮಾಡಲು ಬಂದರು. ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ಸಿರಾಜ್ ಬೌಲಿಂಗ್ ಮಾಡುತ್ತಿರುವುದನ್ನು ಕಂಡ ಗ್ರೌಂಡ್ ನಲ್ಲಿದ್ದ ಅಭಿಮಾನಿಗಳು, ಚಪ್ಪಾಳೆಯೊಂದಿಗೆ ಪ್ರೋತ್ಸಾಹ ನೀಡಿದರು.ಇದರಿಂದ ಉತ್ತೇಜನಗೊಂಡ ಮೊಹಮ್ಮದ್ ಸಿರಾಜ್, ಐದನೇ ಎಸೆತದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸಮನ್ ರಚಿನ್ ರವೀಂದ್ರ ಅವರ ವಿಕೆಟ್ ಕೂಡ ಪಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.../h5ws5B5HSy