3.0: ನೂತನ ಸಚಿವರಿಗೆ ಖಾತೆ ಹಂಚಿಕೆ: ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ, ನಡ್ಡಾಗೆ ಆರೋಗ್ಯ! ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸರ್ಕಾರದ 71 ಸಚಿವರೊಂದಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸರ್ಕಾರದ 71 ಸಚಿವರೊಂದಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದರು.ಇದೀಗ ನೂತನ ಸಚಿವರಿಗೆ ಪ್ರಧಾನಿ ಮೋದಿ ಖಾತೆ ಹಂಚಿಕೆ ಮಾಡಿದ್ದಾರೆ. ಅದರಂತೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಸಚಿವರಾಗಿ ನಿತಿನ್ ಗಡ್ಕರಿ, ಗೃಹ ಸಚಿವರಾಗಿ ಅಮಿತ್ ಶಾ, ರಕ್ಷಣಾ ಸಚಿವರಾಗಿ ರಾಜನಾಥ್ ಸಿಂಗ್, ಹಾಗೂ ವಿದೇಶಾಂಗ ಸಚಿವರಾಗಿ ಎಸ್ ಜೈಶಂಕರ್ ಅವರಿಗೆ ಮತ್ತದೆ ಖಾತೆಗಳಲ್ಲಿ ಮುಂದುವರೆಯುತ್ತಿದ್ದಾರೆ. ಇನ್ನು ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ ರಾಜ್ಯ ಸಚಿವರಾಗಿ ಅಜಯ್ ತಮ್ತಾ ಮತ್ತು ಹರ್ಷ್ ಮಲ್ಹೋತ್ರಾಗೆ ಉಸ್ತುವಾರಿ ವಹಿಸಲಾಗಿದೆ.ಕೃಷಿ - ಶಿವರಾಜ್ ಸಿಂಗ್ ಚೌಹಾಣ್ವಿದ್ಯುತ್ ಮತ್ತು ನಗರ ವ್ಯವಹಾರಗಳ ಸಚಿವಾಲಯ - ಮನೋಹರ್ ಲಾಲ್ ಖಟ್ಟರ್ವಾಣಿಜ್ಯ - ಪಿಯೂಷ್ ಗೋಯಲ್ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ - ಹರ್ದೀಪ್ ಸಿಂಗ್ ಪುರಿರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ - ಅಶ್ವಿನಿ ವೈಷ್ಣವ್ಶಿಕ್ಷಣ - ಧರ್ಮೇಂದ್ರ ಪ್ರಧಾನ್ಆರೋಗ್ಯ - ಜೆಪಿ ನಡ್ಡಾಕಾರ್ಮಿಕ ಮತ್ತು ಕ್ರೀಡೆ - ಮನ್ಸುಖ್ ಮಾಂಡವಿಯಾಪರಿಸರ - ಭೂಪೇಂದ್ರ ಯಾದವ್ವಿಮಾನಯಾನ - ರಾಮ್ ಮೋಹನ್ ಯಾದವ್ಸಂಸದೀಯ ವ್ಯವಹಾರಗಳು - ಕಿರಣ್ ರಿಜಿಜು - ಜಿತನ್ ರಾಮ್ ಮಾಂಝಿಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ - ಪ್ರಲ್ಹಾದ್ ಜೋಶಿಉಕ್ಕು, ಭಾರೀ ಕೈಗಾರಿಕೆ - ಹೆಚ್ ಡಿ ಕುಮಾರಸ್ವಾಮಿಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣಾ ಉದ್ಯಮ