ಗೆ 3.6 ಕೋಟಿ ರೂ ವ್ಯಯಿಸಿದ ಮಾಜಿ ಸಿಎಂ ಜಗನ್?; ದಿನಕ್ಕೆ 993 ರಂತೆ 5 ವರ್ಷಗಳಲ್ಲಿ 18 ಲಕ್ಷ ಮೊಟ್ಟೆ ಪಫ್ ಖರೀದಿ! ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹರ್ ರೆಡ್ಡಿ ವಿರುದ್ಧ ದಿನಕ್ಕೊಂದು ಆರೋಪಗಳು ಕೇಳಿಬರುತ್ತಿದ್ದು, ಇದೀಗ ಹೊಸದಾಗಿ 'ಮೊಟ್ಟೆ ಪಫ್ಸ್' ವಿವಾದ ಹೊಸದಾಗಿ ಸೇರ್ಪಡೆಯಾಗಿದೆ. ಅಮರಾವತಿ: ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ Puffsಗಳಾಗಿ ಬರೊಬ್ಬರಿ 3.6 ಕೋಟಿ ರೂ ವ್ಯಯಿಸಿದ್ದಾರೆ ಎಂದು ಆರೋಪಿಸಲಾಗಿದೆ.ಹೌದು.. ಅಧಿಕಾರದಿಂದ ಕೆಳಗಿಳಿದ ಬಳಿಕ ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹರ್ ರೆಡ್ಡಿ ವಿರುದ್ಧ ದಿನಕ್ಕೊಂದು ಆರೋಪಗಳು ಕೇಳಿಬರುತ್ತಿದ್ದು, ಇದೀಗ ಹೊಸದಾಗಿ 'ಮೊಟ್ಟೆ ಪಫ್ಸ್' ವಿವಾದ ಹೊಸದಾಗಿ ಸೇರ್ಪಡೆಯಾಗಿದೆ.ಜಗನ್ ಮೋಹನ್ ರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ಮೊಟ್ಟೆ ಪಫ್ಸ್ ಗಳಿಗಾಗಿ ಬರೊಬ್ಬರಿ 3.6 ಕೋಟಿ ರೂ ವ್ಯಯಿಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿದ್ದು ಟ್ವೀಟ್ ನಲ್ಲಿ 'ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ವತಿಯಿಂದ ಪ್ರತಿದಿನ 993 ಮೊಟ್ಟೆ ಪಫ್ಸ್‌ಗಳನ್ನು ಖರೀದಿಸಲಾಗಿದ್ದು, 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್‌ಗಳಗಾಗಿಯೇ 3.62 ಕೋಟಿ ಖರ್ಚು ಮಾಡಲಾಗಿದೆ' ಎಂದು ಆರೋಪಿಸಲಾಗಿದೆ.ಅಂತೆಯೇ ಮೊಟ್ಟೆ ಪಫ್ಸ್ ಗಳಿಗಾಗಿ ಜಗನ್ ಸರ್ಕಾರ ಪ್ರತಿವರ್ಷ 72 ಲಕ್ಷ ರೂ ವೆಚ್ಚ ಮಾಡಲಾಗಿದೆ. ಈ ಕುತೂಹಲಕಾರಿ ಪ್ರಕರಣದಿಂದ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿರುವ ಬಗ್ಗೆ ಹಾಲಿ ಟಿಡಿಪಿ-ಜನಸೇನಾ ಮೈತ್ರಿ ಸರ್ಕಾರ ತನಿಖೆಗೆ ಮುಂದಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.₹3.6 : ' # ' ₹3.62 5 ₹72 /, 993 , 18 … ../Svgv9ydMuQಆರೋಪ ತಳ್ಳಿ ಹಾಕಿದ YCPಮೊಟ್ಟೆ ಪಫ್ಸ್ ಖರೀದಿ ಆರೋಪವನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷ ತಳ್ಳಿ ಹಾಕಿದ್ದು, ‘ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅಥವಾ ನಂಬಲರ್ಹ ಮೂಲಗಳನ್ನು ಉಲ್ಲೇಖಿಸದೆ ಪತ್ರಕರ್ತರು ಇಂತಹ ಆಧಾರರಹಿತ ವದಂತಿಗಳಿಗೆ ಹರಡುತ್ತಿರುವುದನ್ನು ನೋಡುವುದು ನಿಜವಾಗಿಯೂ ನಿರಾಶಾದಾಯಕವಾಗಿದೆ. ಯಾವುದೇ ದೃಢೀಕರಣ ಅಥವಾ ಪುರಾವೆಗಳಿಲ್ಲದೆ ಇಂತಹ ಅಬ್ಬರದ ತಪ್ಪು ಮಾಹಿತಿಯನ್ನು ಟ್ವೀಟ್ ಮಾಡುವುದು ಹೇಗೆ? ಸಾಮಾಜಿಕ ಮಾಧ್ಯಮಗಳಿಂದ ಯಾದೃಚ್ಛಿಕ (ರ‍್ಯಾಂಡಮ್‌) ಮಾಹಿತಿಯನ್ನು ಪಡೆದು ಅವುಗಳನ್ನು ಸುದ್ದಿಗಳಾಗಿ ಪರಿವರ್ತಿಸುವುದು ಪತ್ರಿಕೋದ್ಯಮಕ್ಕೆ ಮಾಡುವ ಅಪಚಾರವಾಗಿದೆ. ಸತ್ಯಕ್ಕಿಂತ ವದಂತಿಗಳಿಗೆ ಆದ್ಯತೆ ನೀಡುತ್ತಿರುವುದು ವಿಷಾದದ ಸಂಗತಿ’ ಎಂದು ತಿರುಗೇಟು ನೀಡಿದೆ.' . ? … ://./X8XvJzTVP9