ಉತ್ತರಪ್ರದೇಶ: ಹುಟ್ಟಲಿರುವ ಮಗು ಗಂಡಾ, ಹೆಣ್ಣಾ ಎಂದು ತಿಳಿಯಲು ಪತ್ನಿಯ ಹೊಟ್ಟೆ ಸೀಳಿದ ಪತಿಗೆ ಜೀವಾವಧಿ ಶಿಕ್ಷೆ! ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ಕ್ರೌರ್ಯದ ಮಿತಿ ದಾಟಿತ್ತು. ಪತ್ನಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಲಿಂಗವನ್ನು ಪತ್ತೆ ಮಾಡಲು ಆಕೆಯ ಹೊಟ್ಟೆಯನ್ನೇ ಸೀಳಿದ್ದನು. ಬದೌನ್‌: ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ಕ್ರೌರ್ಯದ ಮಿತಿ ದಾಟಿತ್ತು. ಪತ್ನಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಲಿಂಗವನ್ನು ಪತ್ತೆ ಮಾಡಲು ಆಕೆಯ ಹೊಟ್ಟೆಯನ್ನೇ ಸೀಳಿದ್ದನು.ಮೂರು ವರ್ಷಗಳ ಹಿಂದೆ ಪನ್ನಾ ಲಾಲ್ ಎಂಬಾತ ತನ್ನ 8 ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದನು. ಪನ್ನಾ ಲಾಲ್‌ಗೆ ಈಗಾಗಲೇ 5 ಹೆಣ್ಣು ಮಕ್ಕಳಿದ್ದು, ಮತ್ತೊಂದು ಹೆಣ್ಣು ಮಗು ಬೇಕಿರಲಿಲ್ಲ. ಈ ಘಟನೆಯ ನಂತರ ಹೇಗೋ ಪತ್ನಿ ಅನಿತಾ ಪ್ರಾಣ ಉಳಿಸಲಾಯಿತಾದರೂ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ರಕ್ಷಿಸಲಾಗಲಿಲ್ಲ. ಈ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿರುವ ಈ ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಹೊಟ್ಟೆ ಸೀಳಿದ ಸ್ಥಿತಿಯಲ್ಲಿ ಅನಿತಾ ಅವರನ್ನು ದೆಹಲಿಯ ಸಫ್ದರ್‌ಜಂಗ್‌ಗೆ ಕರೆತರಲಾಯಿತು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಅನಿತಾಳ ಜೀವವನ್ನು ಉಳಿಸಲಾಯಿತು. ಅನಿತಾ ಅವರ ಸಹೋದರ ರವಿ ಸಿಂಗ್, 'ಪನ್ನಾ ಲಾಲ್ ಮತ್ತು ಅನಿತಾ 25 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರಿಗೂ 5 ಹೆಣ್ಣು ಮಕ್ಕಳಿದ್ದಾರೆ. ಆತ ಗಂಡು ಮಗುವಿನ ಬಗ್ಗೆ ಚಿಂತಿತರಾಗಿದ್ದರು ಎಂದು ಹೇಳಿದರು.ನನ್ನ ಸಹೋದರಿ ಆರನೇ ಬಾರಿಗೆ ಗರ್ಭಿಣಿಯಾದಾಗ, ನಾನು ಪನ್ನಾ ಗ್ರಾಮದ ಪಂಡಿತರು ಬಳಿ ಹೋಗಿದ್ದೆ. ಪಂಡಿತರು ಈ ಬಾರಿಯೂ ಹೆಣ್ಣು ಮಗು ಆಗುತ್ತದೆ ಎಂದು ಹೇಳಿದ್ದರು.ಇದರಿಂದ ಬೇಸರಗೊಂಡಿದ್ದ ಪನ್ನಾ ಲಾಲ್ ಹೆಂಡತಿ ಹೊಟ್ಟೆಯಲ್ಲಿ ಗಂಡು ಮಗುವಿದೆಯೋ ಇಲ್ಲವೋ ಎಂದು ತಿಳಿಯಲು ಈ ರೀತಿ ಮಾಡಿದ್ದನು.