ದನ ಕಳ್ಳಸಾಗಣೆದಾರ ಎಂದು ಭಾವಿಸಿ ವಿದ್ಯಾರ್ಥಿ ಹತ್ಯೆ: ಪ್ರಧಾನಿ ಮಾತನಾಡುತ್ತಾರಾ? ಕಪಿಲ್ ಸಿಬಲ್ ಪ್ರಶ್ನೆ ಆಗಸ್ಟ್ 23 ರಂದು ಫರಿದಾಬಾದ್‌ನಲ್ಲಿ ಐದು ಶಂಕಿತ ಗೋರಕ್ಷಕರ ತಂಡ ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಕಾರಿನಲ್ಲಿ ಹಿಂಬಾಲಿಸಿ ಆರ್ಯನ್ ಮಿಶ್ರಾ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿತ್ತು ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ. ನವದೆಹಲಿ: ದ್ವೇಷದ ಅಜೆಂಡಾಕ್ಕೆ ನೀಡಿದ ಪ್ರೋತ್ಸಾಹದಿಂದಲೇ ದನ ಕಳ್ಳ ಸಾಗಣೆದಾರನೆಂದು ತಪ್ಪಾಗಿ ಭಾವಿಸಿ 12ನೇ ತರಗತಿಯ ವಿದ್ಯಾರ್ಥಿ ಹತ್ಯೆಯಾಗಿದೆ ಎಂದು ಬುಧವಾರ ಹೇಳಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಘಟನೆ ಕುರಿತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.ಆಗಸ್ಟ್ 23 ರಂದು ಫರಿದಾಬಾದ್‌ನಲ್ಲಿ ಐದು ಶಂಕಿತ ಗೋರಕ್ಷಕರ ತಂಡ ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಕಾರಿನಲ್ಲಿ ಹಿಂಬಾಲಿಸಿ ಆರ್ಯನ್ ಮಿಶ್ರಾ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿತ್ತು ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿರುವ ಕಪಿಲ್ ಸಿಬಲ್, ನಮಗೆ ನಾಚಿಕೆಯಾಗುತ್ತಿದೆ. ಹರಿಯಾಣದಲ್ಲಿ ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಗೋರಕ್ಷಕರು ಆರ್ಯನ್ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಕಾರಣ ದ್ವೇಷದ ಅಜೆಂಡಾಕ್ಕೆ ನೀಡುತ್ತಿರುವ ಪ್ರೋತ್ಸಾಹ ಎಂದಿದ್ದಾರೆ."ನಮ್ಮ ಪ್ರಧಾನಿ, ಉಪರಾಷ್ಟ್ರಪತಿ, ನಮ್ಮ ಗೃಹ ಸಚಿವರು ಮಾತನಾಡುತ್ತಾರೆಯೇ!" ಎಂದು ಸಿಬಲ್ ಕೇಳಿದ್ದಾರೆ. ಎಲ್ಲಾ ಐವರು ಆರೋಪಿಗಳಾದ ಸೌರಭ್, ಅನಿಲ್ ಕೌಶಿಕ್, ವರುಣ್, ಕೃಷ್ಣ ಮತ್ತು ಆದೇಶ್ ಅವರನ್ನು ಆಗಸ್ಟ್ 28 ರಂದು ಬಂಧಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಯಾದವ್ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆಗಸ್ಟ್ 23 ರ ರಾತ್ರಿ ಎರಡು ಕಾರುಗಳಲ್ಲಿ ಕೆಲವು ಶಂಕಿತ ಜಾನುವಾರು ಕಳ್ಳಸಾಗಣೆದಾರರು ನಗರದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಸಂತ್ರಸ್ತರಾದ ಆರ್ಯನ್ ಮಿಶ್ರಾ ಮತ್ತು ಅವರ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ದನದ ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿ ಅವರ ಕಾರನ್ನು ಸುಮಾರು 30 ಕಿ.ಮೀ ವರೆಗೆ ಹಿಂಬಾಲಿಸಿದ್ದರು. ಅಲ್ಲದೇ ಸ್ಥಳದಲ್ಲೇ ಆರ್ಯನ್ ನನ್ನು ಕೊಂದು ಹಾಕಿದ್ದರು. 𝐌𝐢𝐬𝐡𝐫𝐚 ( 12th ) “ ” ! : - !