ಜಮ್ಮು-ಕಾಶ್ಮೀರ ಚುನಾವಣೆ: , ಅಭ್ಯರ್ಥಿಗಳ ಪರ ಮಾಜಿ ಉಗ್ರರ ಬಹಿರಂಗ ಪ್ರಚಾರ- ರಾಮ್ ಮಾಧವ್ ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಮೈತ್ರಿ ಪರಿಸ್ಥಿತಿ ಎದುರಾದರೆ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಕ್ಷಗಳು ಮಾಜಿ ಉಗ್ರರಿಂದ ಬೆಂಬಲ ಪಡೆಯುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಬುಧವಾರ ಆರೋಪಿಸಿದ್ದಾರೆ.ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಉಲ್ಲೇಖಿಸಿ ಮಾತನಾಡಿದ ಜಮ್ಮು-ಕಾಶ್ಮೀರದ ಬಿಜೆಪಿ ಉಸ್ತುವಾರಿ ಮಾಧವ್, ಈ ಎರಡು ಕುಟುಂಬಗಳಿಗೆ ಬಾಗಿಲು ತೋರಿಸಬೇಕಾಗಿದೆ. ಮತ್ತು ಅಭ್ಯರ್ಥಿಗಳ ಪರ ಮಾಜಿ ಉಗ್ರರು ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ನನಗಿದೆ ಎಂದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರವನ್ನ ತನ್ನ ಕೆಟ್ಟ ದಿನಗಳನ್ನು ಕೊಂಡೊಯ್ಯಲು ಬಯಸುವ ಪಕ್ಷಗಳನ್ನು ಜನರು ಸೋಲಿಸಬೇಕು ಮತ್ತು ಶಾಂತಿ ಮತ್ತು ಪ್ರಗತಿಯನ್ನು ಬಯಸುವ ಹೊಸ ನಾಯಕತ್ವವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು., ಮತ್ತಿತರರು ಜಮ್ಮು- ಕಾಶ್ಮೀರವನ್ನು ಮತ್ತೆ ಹಳೆಯ ಕೆಟ್ಟ ದಿನಗಳಿಗೆ ಕೊಂಡೊಯ್ಯುವ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಹೊಸ ಪಕ್ಷ, ಹೊಸ ನಾಯಕರು ಬರಲಿದ್ದು, ಜಮ್ಮು ಪ್ರದೇಶದಲ್ಲಿ ಬಿಜೆಪಿ ಶಾಂತಿ ಮತ್ತು ಅಭಿವೃದ್ಧಿಯ ಪ್ರತಿನಿಧಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಮೈತ್ರಿ ಪರಿಸ್ಥಿತಿ ಎದುರಾದರೆ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.ಸೆಪ್ಟೆಂಬರ್ 6 ರಂದು ಜಮ್ಮುವಿನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಲಿದ್ದಾರೆ. ತದನಂತರ ಪ್ರಧಾನಿ ಮೋದಿ ಮತ್ತಿತರ ನಾಯಕರು ಭೇಟಿ ನೀಡಲಿದ್ದಾರೆ ಎಂದು ರಾಮ್ ಮಾಧವ್ ತಿಳಿಸಿದರು.