ಕೆನಡಾ ಮೂಲದ ಉಗ್ರ ಲಾಂಡಾ ಗುಂಪಿನ ಐವರು ಸಹಚರರ ಬಂಧನ ಈ ಗ್ಯಾಂಗ್ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ ಮತ್ತು ಅನೇಕ ಇತರ ಅಪರಾಧ ಚಟುವಟಿಕೆಗಳಂತಹ ಬಹು ಘೋರ ಅಪರಾಧಗಳಲ್ಲಿ ತೊಡಗಿದೆ ಚಂಡೀಗಢ: ಕೆನಡಾ ಮೂಲದ ಉಗ್ರ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾನ ಐವರು ಸಹಚರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತರಿಂದ ಮೂರು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ತಿಳಿಸಿದ್ದಾರೆ."ಸಂಘಟಿತ ಅಪರಾಧದ ವಿರುದ್ಧದ ಕಾರ್ಯಾಚರಣೆಯಲ್ಲಿ ಜಲಂಧರ್ ಕಮಿಷನರೇಟ್ ಪೊಲೀಸರು ಕೆನಡಾ ಮೂಲದ ಭಯೋತ್ಪಾದಕ ಲಖ್ಬೀರ್ ಆಲಿಯಾಸ್ ಲಾಂಡಾನ ಐವರು ಸಹಚರರನ್ನು ಬಂಧಿಸಿದ್ದಾರೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಬಂಧಿತ ಲಾಂಡಾ ಗ್ಯಾಂಗ್ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.ಈ ಗ್ಯಾಂಗ್ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ ಮತ್ತು ಅನೇಕ ಇತರ ಅಪರಾಧ ಚಟುವಟಿಕೆಗಳಂತಹ ಬಹು ಘೋರ ಅಪರಾಧಗಳಲ್ಲಿ ತೊಡಗಿದೆ" ಎಂದು ಯಾದವ್ ಹೇಳಿದ್ದಾರೆ. ಜೂನ್ 10 ರಂದು ಲಾಂಡಾದ ಮೂವರು ಸಹಚರರನ್ನು, ಜೂನ್ 30 ರಂದು ಐವರು ಸಹಚರರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.