ದೇಶದಲ್ಲಿ ಅತ್ಯಂತ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಕೆದಾರ 3ನೇ ರಾಜ್ಯ ಪಂಜಾಬ್! ಪಂಜಾಬ್‌ನಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯು 5,270 ತಲುಪಿದೆ. ಈ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ದೇಶದಲ್ಲಿ ಮೂರನೇ ಅತಿ ಹೆಚ್ಚು ರಾಸಾಯನಿಕ ಕೀಟನಾಶಕ ಗ್ರಾಹಕರನ್ನಾಗಿ ಮಾಡಿದೆ. ಚಂಡೀಗಢ: ದೇಶದಲ್ಲಿ ಸಾರಜನಕ, ಫಾಸ್ಫೇಟ್ ಮತ್ತು ಪೊಟ್ಯಾಷ್‌ನಂತಹ ಪೋಷಕಾಂಶಗಳನ್ನು ಒಳಗೊಂಡಿರುವ ಅತಿ ಹೆಚ್ಚು ರಸಗೊಬ್ಬರ ಬಳಕೆದಾರ ರಾಜ್ಯ ಪಂಜಾಬ್ ಆಗಿದೆ. ಇಲ್ಲಿ ಪ್ರತಿ ಹೆಕ್ಟೇರ್ ಗೆ ಸರಾಸರಿ 223 ಕೆಜಿ ರಸಗೊಬ್ಬರ ಬಳಸುತ್ತಿದ್ದು, ರಾಷ್ಟ್ರೀಯ ಸರಾಸರಿ ಪ್ರತಿ ಹೆಕ್ಟೇರ್‌ಗೆ 90 ಕೆಜಿಗಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ.ಪಂಜಾಬ್‌ನಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯು 5,270 ತಲುಪಿದೆ. ಈ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ದೇಶದಲ್ಲಿ ಮೂರನೇ ಅತಿ ಹೆಚ್ಚು ರಾಸಾಯನಿಕ ಕೀಟನಾಶಕ ಗ್ರಾಹಕರನ್ನಾಗಿ ಮಾಡಿದೆ. ಕೇವಲ 7,000 ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತದೆ.ರಾಜ್ಯಸಭೆಯಲ್ಲಿ ಸಂಸದ ಸತ್ನಾಮ್ ಸಿಂಗ್ ಸಂಧು ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಚೌಹಾಣ್ ಉತ್ತರ ನೀಡುತ್ತಿದ್ದಂತೆ ಈ ಎಲ್ಲ ಸಂಗತಿಗಳು ಬೆಳಕಿಗೆ ಬಂದಿವೆ. 2022-23ರಲ್ಲಿ ಪಂಜಾಬ್‌ನ 15 ಜಿಲ್ಲೆಗಳು ರಾಜ್ಯದ ಸರಾಸರಿ 254.39 ಕ್ಕಿಂತ ಪ್ರತಿ ಹೆಕ್ಟೇರ್‌ಗೆ ಕೆಜಿ ಬಳಕೆಯನ್ನು ಹೊಂದಿವೆ. ರಾಜ್ಯ ಸರಾಸಿರಿ ಬಳಕೆ ಪ್ರತಿ ಹೆಕ್ಟೇರ್‌ಗೆ ಸುಮಾರು 223 ಕೆಜಿಯಷ್ಟಿದ್ದು, ರಾಷ್ಟ್ರೀಯ ಸರಾಸರಿ ಪ್ರತಿ ಹೆಕ್ಟೇರ್ ಗೆ 90 ಕೆಜಿ ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.ಪಂಜಾಬ್ ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, ಬೆಳೆ ಬೆಳೆಯುವ ಒಟ್ಟು 78.71 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 7,000 ಹೆಕ್ಟೇರ್ ಈಗ ಪ್ರಮಾಣೀಕೃತ ಸಾವಯವ ಕೃಷಿಯಲ್ಲಿದೆ. ಸಾವಯವ ಗೊಬ್ಬರಗಳ ಉತ್ಪಾದನೆಯು 2022-23ರಲ್ಲಿ 7407.066 ಗೆ ಹೆಚ್ಚಾಗಿದೆ. ಪಂಜಾಬ್‌ನಲ್ಲಿ ಸಾವಯವ ಗೊಬ್ಬರಗಳ ಉತ್ಪಾದನೆ ಮತ್ತು ಬಳಕೆಯಲ್ಲಿ ಹೆಚ್ಚಳವನ್ನು ಸೂಚಿಸುತ್ತದೆ. ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸಲು, ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ. ಹಸಿರು ಗೊಬ್ಬರ ಮತ್ತು ಅಗತ್ಯವಿದ್ದಾಗ ಜಿಪ್ಸಮ್ ಅಳವಡಿಕೆಯಿಂದ ಆಗುವ ಪ್ರಯೋಜನಗಳನ್ನು ಒಳಗೊಂಡಂತೆ ಸರಿಯಾದ ರಸಗೊಬ್ಬರ ಬಳಕೆ ಕುರಿತು ರೈತರಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಉತ್ತರದಲ್ಲಿ ಸಚಿವರು ತಿಳಿಸಿದರು.