: ಹೆಂಡತಿ ಯಾಮಾರಿಸಿ ಮನೆಗೆ ಪ್ರೇಯಸಿ ಕರೆಸಿದ ಭೂಪನಿಗೆ ''ಸಾರ್ವಜನಿಕ ಗೂಸಾ''; ಮಾನವ ಹಕ್ಕು ಆಯೋಗ ನೋಟಿಸ್! ಇತ್ತೀಚೆಗೆ ಮಹಿಳೆ ಮತ್ತು ಪುರುಷನಿಗೆ ಸಾರ್ವನಿಕವಾಗಿ ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.. ಈ ವಿಡಿಯೋಗೆ ಸಂಬಂಧಪಟ್ಟಂತೆ ಇದೀಗ ಮಾನವ ಹಕ್ಕು ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೋಲ್ಕತಾ: ಇತ್ತೀಚೆಗೆ ಮಹಿಳೆ ಮತ್ತು ಪುರುಷನಿಗೆ ಸಾರ್ವನಿಕವಾಗಿ ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.. ಈ ವಿಡಿಯೋಗೆ ಸಂಬಂಧಪಟ್ಟಂತೆ ಇದೀಗ ಮಾನವ ಹಕ್ಕು ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಹೌದು.. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಚೋಪ್ರಾದಲ್ಲಿ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ್ದು ಭಾರಿ ಸುದ್ದಿಯಾಗಿತ್ತು. ಈ ಘಟನೆಗೆ ಸಂಬಂಧಪಟ್ಟ ದೃಶ್ಯ ವೈರಲ್ ( ) ಆಗಿತ್ತು. ಹಾಗಾಗಿ ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು.ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಇದೀಗ ಇದೇ ವಿಚಾರವಾಗಿ ಮಾನವಹಕ್ಕುಗಳ ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಜೋಡಿ ಮೇಲೆ ನಡೆದ ಅಮಾನುಷ ಹಲ್ಲೆಯ ವಿಡಿಯೋ ಕುರಿತು ವಿಸ್ತೃತ ವರದಿ ನೀಡುವಂತೆ ಕೋರಿ ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯ ಸ್ಥಿತಿಗತಿ ವರದಿ, ಸಂತ್ರಸ್ತರ ಆರೋಗ್ಯ ಮತ್ತು ಒದಗಿಸಿದ ಯಾವುದೇ ವೈದ್ಯಕೀಯ ಚಿಕಿತ್ಸೆಯ ಕುರಿತು ವಿವರವಾದ ವರದಿಯನ್ನು ನೀಡುವಂತೆ ಆಯೋಗವು ಆದೇಶಿಸಿದೆ., ' . , . , , ' . … ../lbDiIIIdWeಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು: ಸಂತ್ರಸ್ತನ ಅಚ್ಚರಿ ಹೇಳಿಕೆಇನ್ನು ಅಂದು ಸಾರ್ವಜನಿಕವಾಗಿ ಥಳಿತಕ್ಕೊಳಗಾದ ಸಂತ್ರಸ್ತ ವ್ಯಕ್ತಿ 'ಆಗಿದ್ದೆಲ್ಲಾ ಒಳ್ಳೆಯದಕ್ಕೆ' ಎಂದು ಹೇಳುವ ಮೂಲಕ ಆಶ್ಚರ್ಯನ್ನುಂಟುಮಾಡಿದ್ದಾನೆ. ವಿಡಿಯೊ ವೈರಲ್ ಆದ ಕೆಲವು ದಿನಗಳ ನಂತರ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಸಂತ್ರಸ್ತ ವ್ಯಕ್ತಿ, ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿರುವುದ ಜೊತೆಗೆ ಈ ಘಟನೆ ಆಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾನೆ. ನಾನೊಬ್ಬ ವಿವಾಹಿತ. ಆದರೆ ನಾನು ಹೆಂಡತಿಗೆ ಮೋಸ ಮಾಡಿ ಮತ್ತೊಬ್ಬ ವಿವಾಹಿತ ಮಹಿಳೆಯನ್ನು ಮನೆಗೆ ಕರೆತಂದು ಮೋಜು ಮಾಡುತ್ತಿದ್ದೆ.ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದೆ. ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ನಮಗಿಬ್ಬರಿಗೆ ನಡು ರಸ್ತೆಯಲ್ಲಿ ಬೆತ್ತದಿಂದ ಬಾರಿಸಲಾಯಿತು. ನನ್ನದೇ ತಪ್ಪಾಗಿರುವುದರಿಂದ ಈ ಬಗ್ಗೆ ಯಾರ ವಿರುದ್ಧವೂ ದೂರು ನೀಡುವುದಿಲ್ಲ ಎಂಬುದಾಗಿ ಆತ ತಿಳಿಸಿದ್ದಾನೆ. ಈಗ ಏನು ನಡೆಯಿತೋ ಅದು ಒಳ್ಳೆಯದೆ ಆಗಿದೆ. ಇದರಿಂದ ಈಗ ನನ್ನ ಪತ್ನಿಯ ಜೊತೆಗೆ ಶಾಂತಿಯಿಂದ ಬದುಕಬಹುದು ಎಂದಾತ ಖುಷಿ ವ್ಯಕ್ತಪಡಿಸಿದ್ದಾನೆ.ಏನಿತ್ತು ವಿಡಿಯೋದಲ್ಲಿ?ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ದಂಪತಿಯನ್ನು ಬಿದಿರಿನ ಕೋಲಿನಿಂದ ಪದೇಪದೇ ಹೊಡೆಯುವುದನ್ನು ತೋರಿಸುತ್ತದೆ. ಸುತ್ತಲೂ ಜನರು ನಿಂತಿರುವುದು ಕಾಣಿಸುತ್ತದೆ. ಆದರೆ ಯಾರು ಈ ಜೋಡಿಯ ಸಹಾಯಕ್ಕೆ ಬರುತ್ತಿಲ್ಲ. ಸ್ಥಳೀಯ ಟಿಎಂಸಿ ನಾಯಕ ತಜ್ಜಿಮುಲ್ ಹಕ್ ಅವರ ನಿರ್ದೇಶನದಲ್ಲಿ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು.