: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಢಿಕ್ಕಿ; ನರಳಿ, ನರಳಿ ಹಳಿ ಮೇಲೆಯೇ ಪ್ರಾಣ ಬಿಟ್ಟ ಕಾಡಾನೆ! ವೇಗವಾಗಿ ಚಲಿಸುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ. ಗುವಾಹತಿ: ವೇಗವಾಗಿ ಚಲಿಸುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ.ಅಸ್ಸಾಂನ ಮೊರಿಗಾಂವ್‌ನಲ್ಲಿರುವ ಜಾಗಿರೋಡ್ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆನೆ ಗಂಭೀರವಾಗಿ ಗಾಯಗೊಂಡಿತ್ತು.ರೈಲಿನ ಹಳಿ ಮೇಲೆ ಬಿದ್ದಿದ್ದ ಆನೆ ಎದ್ದೇಳಲು ಹರಸಾಹಸ ಪಟ್ಟು ಕೊನೆಗೆ ಹಳಿ ಮೇಲೆಯೇ ಪ್ರಾಣ ಬಿಟ್ಟಿದೆ.ಹೇಗಾಯ್ತು ದುರಂತಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲು ಮೊರಿಗಾಂವ್‌ನಲ್ಲಿ ಚಲಿಸುತ್ತಿರುವಾಗ ಕಾಡಾನೆ ಹಿಂಡಿನಿಂದ ಈ ಆನೆ ಬೇರ್ಪಟ್ಟಿದೆ. ಜಾಗಿರೋಡ್ ರೈಲು ನಿಲ್ದಾಣದ ಬಳಿ ಕಾಡಾನೆಗಳೆರಡು ರೈಲು ಹಳಿಯ ಮೇಲೆ ಬಂದಿದ್ದು ಈ ಪೈಕಿ ಒಂದು ಆನೆಗೆ ರೈಲು ಡಿಕ್ಕಿ ಹೊಡೆದಿದೆ. ಮತ್ತೊಂದು ಆನೆ ರೈಲು ಹಳಿಯನ್ನು ಕ್ರಾಸ್ ಮಾಡಿದ್ದು, ಅಪಾಯದಿಂದ ಪಾರಾಗಿದೆ. 4.30pm . @ @ @ @ ../JHCvys2xTJರೈಲಿಗೆ ಡಿಕ್ಕಿ ಹೊಡೆದ ಕಾಡಾನೆ ಸ್ಥಳದಲ್ಲೇ ನರಳಿ, ನರಳಿ ಪ್ರಾಣ ಬಿಟ್ಟಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಕಾಡಾನೆ ನರಳಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಕೊನೆಗೆ ರೈಲ್ವೇ ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಸತ್ತ ಆನೆಯ ಮೃತದೇಹವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಪಶುವೈದ್ಯರು ಕಾಡಾನೆಯನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ.